ಕೊಲ್ಲೂರು ಶ್ರೀ ಮೂಕಾಂಬಿಕೆ ಸನ್ನಿಧಾನದಲ್ಲಿ ಗಾನಗಂಧರ್ವ ಡಾ.ಕೆ.ಜೆ.ಯೇಸುದಾಸ್ ಹುಟ್ಟುಹಬ್ಬ ಆಚರಣೆ
ಕುಂದಾಪುರ : ದಕ್ಷಿಣ ಭಾರತದ ಪ್ರಸಿದ್ದ ಹಿನ್ನೆಲೆ ಗಾಯಕ ಪದ್ಮಭೂಷಣ ಡಾ.ಕೆ.ಜೆ.ಯೇಸುದಾಸ್ ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕೆ ಸನ್ನಿಧಾನದಲ್ಲಿ ಅತ್ಯಂತ ಸರಳವಾಗಿ ತಮ್ಮ 80 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಗುರುವಾರ ಸಂಜೆ ಪತ್ನಿ ಪ್ರಭಾ ಯೇಸುದಾಸ್, ಪುತ್ರರಾದ ವಿಜಯ್ ಯೇಸುದಾಸ್, ವಿನೋದ್ ಯೇಸುದಾಸ್ ಹಾಗೂ ಕುಟುಂಬ ಸದಸ್ಯರೊಂದಿಗೆ ಕೊಲ್ಲೂರಿಗೆ ಬಂದಿದ್ದ ಅವರು, ಕ್ಷೇತ್ರದ ಅರ್ಚಕ ಎನ್.ಗೋವಿಂದ ಅಡಿಗ ಅವರ ಮಾರ್ಗದರ್ಶನದಲ್ಲಿ ಬೆಳಿಗ್ಗೆಯಿಂದಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಪ್ರತಿ ಬಾರಿಯಂತೆ ಈ ಬಾರಿಯೂ ದೇವಿಗೆ ಚಂಡಿಕಾ […]