ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನ ಸೆ.29ರಿಂದ ಅ.8ರ ವರೆಗೆ ನವರಾತ್ರಿ ಉತ್ಸವ
ಕೊಲ್ಲೂರು: ಕೊಲ್ಲೂರು ಶ್ರೀಮೂಕಾಂಬಿಕಾ ದೇಗುಲದಲ್ಲಿ ಸೆ.29 ರಿಂದ ಅ.8ರ ತನಕ ನವರಾತ್ರಿ ಉತ್ಸವ ಸಂಭ್ರಮದಿಂದ ನಡೆಯಲಿದೆ. ಆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ದೇವಳದಲ್ಲಿ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿವೆ. ದಕ್ಷಿಣ ಭಾರತದ ನಾನಾ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ವಿಜಯದಶಮಿಯಂದು ಸರಸ್ವತಿ ಮಂಟಪದಲ್ಲಿ ನಡೆಯಲಿರುವ ವಿದ್ಯಾರಂಭಕ್ಕೆ ಅನುಕೂಲತೆ ಕಲ್ಪಿಸಲಾಗುವುದು. ದೇವಳದಲ್ಲಿ ಅಕ್ಟೋಬರ್ 7 ಮಹಾ ನವಮಿಯಂದು ಬೆಳಿಗ್ಗೆ 11:30ಕ್ಕೆ ಚಂಡಿಕಾಯಾಗ ನಡೆಯಲಿದೆ. ಪ್ರತಿದಿನ ಸಂಜೆ ಸ್ವರ್ಣಮುಖಿ ಸಭಾಭವನದಲ್ಲಿ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು […]