ಕೊಲ್ಲೂರು ಅಭಯಾರಣ್ಯದಲ್ಲಿ ಟೆಂಟ್ ಪತ್ತೆ: ಊಹಾಪೋಹಗಳಿಗೆ ಬಿತ್ತು ತೆರೆ

ಕುಂದಾಪುರ: ಕೊಲ್ಲೂರು ಸಮೀಪ ದಳಿ ಹಾಗೂ ಅರಿಶಿನ ಗುಂಡಿ ಫಾಲ್ಸ್ ಅಭಯಾರಣ್ಯದಲ್ಲಿ ಪತ್ತೆಯಾದ ಟೆಂಟ್ ಅನ್ನು ಯಾರೋ ವಿರಕ್ತರು ದ್ಯಾನಕ್ಕಾಗಿ ಮಾಡಿಕೊಂಡಿದ್ದಾರೆ ಎಂದು ಎಎನ್‍ಎಫ್ ಸ್ಪಷ್ಟಪಡಿಸಿದೆ. ಈ ಮೂಲಕ ಕಳೆದೆರಡು ದಿನಗಳಿಂದ ಕೊಲ್ಲೂರು ಅಭಯಾರಣ್ಯದಲ್ಲಿ ಪತ್ತೆಯಾದ ಟೆಂಟ್‍ಗೂ ನಕ್ಸಲರಿಗೂ ಸಂಬಂಧವಿದೆ ಎಂಬ ಊಹಾಪೋಹ, ಚರ್ಚೆಗಳಿಗೆ ಕೊನೆಗೂ ತೆರೆ ಬಿದ್ದಂತಾಗಿದೆ. ಸೋಮವಾರ ಕಾಡಿಗೆ ಹೋದ ಸ್ಥಳೀಯರಿಗೆ ಅಭಯಾರಣ್ಯದಲ್ಲಿ ಟೆಂಟ್ ಕಣ್ಣಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು […]