ಕೊಲ್ಲೂರು: ಶಾಪಿಂಗ್ ಹೋದ ಯುವತಿ ನಾಪತ್ತೆ

ಬೈಂದೂರು: ಶಾಪಿಂಗ್ ಗೆಂದು ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಕಿರಿಮಂಜೇಶ್ವರದಲ್ಲಿ ನಡೆದಿದೆ. ಕಿರಿಮಂಜೇಶ್ವರ ಗ್ರಾಮದ ಆದ್ರಗೋಳಿ ನಿವಾಸಿ 21 ವರ್ಷದ ರಮ್ಯಾ ನಾಪತ್ತೆಯಾದ ಯುವತಿ.‌ ಈಕೆ ಜ.10ರಂದು ಬೆಳಿಗ್ಗೆ 10.30ರ ವೇಳೆಗೆ ತಾನು ಕುಂದಾಪುರಕ್ಕೆ ಹೋಗಿ ಬಟ್ಟೆಗಳನ್ನು ಖರೀದಿ ಮಾಡಿಕೊಂಡು ಬರುವುದಾಗಿ ಹೇಳಿ ಹೋದವಳು, ಈವರೆಗೂ ಮನೆಗೆ ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಸಂಬಂಧಿಕರು ಹಾಗೂ ಸ್ನೇಹಿತರ ಮನೆಯಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ […]