ರಾಷ್ಟ್ರವ್ಯಾಪಿ ನಿದ್ರಾ ಸ್ಪರ್ಧೆಯಲ್ಲಿ ಗೆದ್ದು 5 ಲಕ್ಷ ರೂಪಾಯಿ ಬಹುಮಾನ ಪಡೆದ ತ್ರಿಪರ್ಣ ಚಕ್ರವರ್ತಿ

ಕೊಲ್ಕತ್ತಾ: ಇಲ್ಲಿನ ಹೂಗ್ಲಿಯಲ್ಲಿ ಸ್ಥಳೀಯ ಬಾಲಕಿಯೊಬ್ಬಳು ರಾಷ್ಟ್ರವ್ಯಾಪಿ ನಿದ್ರಾ ಸ್ಪರ್ಧೆಯಲ್ಲಿ ಗೆದ್ದು 5 ಲಕ್ಷ ರೂಪಾಯಿ ನಗದು ಬಹುಮಾನ ಪಡೆದಿದ್ದಾಳೆ. ಬಾಲ್ಯದಿಂದಲೂ ನಿದ್ರಿಸುವುದರಲ್ಲಿ ಎತ್ತಿದ ಕೈ ಹೊಂದಿದ್ದ ತ್ರಿಪರ್ಣ ಚಕ್ರವರ್ತಿ ಎನ್ನುವ ಹುಡುಗಿ, ಖಾಸಗಿ ಮ್ಯಾಟ್ರೆಸ್ ಕಂಪನಿ ನಡೆಸಿದ ಸ್ಪರ್ಧೆಯಲ್ಲಿ ದೇಶದ ಅತ್ಯುತ್ತಮ ನಿದ್ದೆಗಾರ್ತಿ ಆಗಿ ಹೊರಹೊಮ್ಮಿದ್ದಾಳೆ. ಸುಮಾರು 5.5 ಲಕ್ಷಕ್ಕೂ ಹೆಚ್ಚು ಸಹ ಸ್ಪರ್ಧಿಗಳನ್ನು ಸೋಲಿಸಿ ತ್ರಿಪರ್ಣ ಈ ಬಹುಮಾನ ಗೆದ್ದಿದ್ದಾಳೆ. ಸತತ 100 ದಿನಗಳ ಕಾಲ ದಿನಕ್ಕೆ 9 ಗಂಟೆಗಳ ಕಾಲ ನಿದ್ರಿಸುವುದು ಸ್ಪರ್ಧೆಯ […]