ಪಂಚಾಯತ್ ಚುನಾವಣೆಗೂ ಮುನ್ನ ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರ ಪಡೆ ನಿಯೋಜನೆ: ಕಲ್ಕತ್ತಾ ಹೈಕೋರ್ಟ್ ಆದೇಶ

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗೆ ಮುನ್ನ ಕಲ್ಕತ್ತಾ ಹೈಕೋರ್ಟ್ ಗುರುವಾರ ಪಶ್ಚಿಮ ಬಂಗಾಳದ ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿದೆ. ಈ ಆದೇಶವನ್ನು 48 ಗಂಟೆಗಳ ಒಳಗೆ ಪಾಲಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚಿಸಿದೆ. ಪ.ಬಂಗಾಳದ ಜಿಲ್ಲೆಗಳಾದ್ಯಂತ ಕೇಂದ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿದ ನ್ಯಾಯಾಲಯ, “ರಾಜ್ಯ ಚುನಾವಣಾ ಆಯೋಗ ಮತ್ತು ಪಶ್ಚಿಮ ಬಂಗಾಳ ರಾಜ್ಯವು ಕೇಂದ್ರ ಪಡೆಗಳ ನಿಯೋಜನೆಯಿಂದ ಏಕೆ ಹಿಂಜರಿಯುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಅಂತಹ ನಿಯೋಜನೆಯು ಈ ಹಿಂದೆ ಅಗತ್ಯ ಫಲಿತಾಂಶಗಳನ್ನು […]

ಸಂಗೀತ ಪ್ರದರ್ಶನ ನೀಡುತ್ತಲೇ ಪ್ರಾಣ ತ್ಯಜಿಸಿದ ಖ್ಯಾತ ಗಾಯಕ ಕೆ.ಕೆ

ಕೋಲ್ಕತ್ತಾ: ಗಾಯಕ-ಸಂಯೋಜಕ ಕೆಕೆ (ಕೃಷ್ಣಕುಮಾರ್ ಕುನ್ನತ್) ಮಂಗಳವಾರ ತಮ್ಮ 53 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಎರಡು ದಿನಗಳ ಸಂಗೀತ ಕಚೇರಿಗಾಗಿ ಕೋಲ್ಕತ್ತಾದಲ್ಲಿದ್ದರು. ಇಲ್ಲಿನ ನಜ್ರುಲ್ ಮಂಚದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ಕೆ.ಕೆ ಅವರನ್ನು ಸಿ ಎಂ ಆರ್ ಐ ಆಸ್ಪತ್ರೆಗೆ ಸಾಗಿಸಲಾಗಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಅವರನ್ನು ಆಸ್ಪತ್ರೆಗೆ ಕರೆತರುವಾಗಲೆ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಅವರು ಶಂಕಿತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸಿಎಂಆರ್‌ಐ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಮೂಲಗಳ ಪ್ರಕಾರ […]