ಕೋಲಾರ: 2,000 ಬಾಕ್ಸ್ ಟೊಮೇಟೋ ಮಾರಾಟ ಮಾಡಿ 38 ಲಕ್ಷ ರೂ ಗಳಿಸಿದ ರೈತ ಕುಟುಂಬ!!

ಕೋಲಾರ: ದೇಶಾದ್ಯಂತ ಟೊಮೇಟೊ ಬೆಲೆ ಗಗನಕ್ಕೇರುತ್ತಿರುವ ನಡುವೆಯೇ ರಾಜ್ಯದ ಕೋಲಾರ ಜಿಲ್ಲೆಯ ರೈತರ ಕುಟುಂಬವೊಂದು ಟೊಮೇಟೋ ಬೆಳೆದು ಜಾಕ್ ಪಾಟ್ ಹೊಡೆದಿದೆ. ಈ ಕುಟುಂಬವು 2,000 ಬಾಕ್ಸ್ ಟೊಮೇಟೋಗಳನ್ನು 38 ಲಕ್ಷ ರೂ ಗಳಿಗೆ ಮಾರಾಟ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ. ವರದಿಯ ಪ್ರಕಾರ, ಕೋಲಾರ ಜಿಲ್ಲೆಯ ಬೇತಮಂಗಲ ಗ್ರಾಮದ ಪ್ರಭಾಕರ ಗುಪ್ತಾ ಮತ್ತು ಅವರ ಸಹೋದರರು ತಮ್ಮ 40 ಎಕರೆ ಜಮೀನಿನಲ್ಲಿ ಟೊಮೇಟೋ ಬೆಳೆದಿದ್ದಾರೆ. ಪ್ರತಿ ಕೆಜಿ ಟೊಮೇಟೊ ಬಾಕ್ಸ್ ಅನ್ನು […]

ಕೋಲಾರ: ಪತ್ನಿಯ ಜೊತೆ ಅತಿಯಾದ ಸಾಮೀಪ್ಯ ಆರೋಪ; ವ್ಯಕ್ತಿಯ ಕತ್ತು ಸೀಳಿದ ಪತಿ

ಕೋಲಾರ: ಜಿಲ್ಲೆಯ 32 ವರ್ಷದ ವ್ಯಕ್ತಿಯೊಬ್ಬ ಜೂನ್ 19 ರಂದು ತನ್ನ ಹೆಂಡತಿಯ ಜೊತೆ ಫೋನ್ ನಲ್ಲಿ ವಿಪರೀತ ಮಾತನಾಡುತ್ತಿದ್ದ ಎನ್ನಲಾದ ವ್ಯಕ್ತಿಯ ಕತ್ತು ಸೀಳಿ ಆತನ ರಕ್ತವನ್ನು ಕುಡಿದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕೃತ್ಯವನ್ನು ಸೋದರ ಸಂಬಂಧಿ ಸೆರೆಹಿಡಿದಿದ್ದು ಇದರ ವೀಡಿಯೊ ವೈರಲ್ ಆಗಿದೆ. ಮಂಡ್ಯಪೇಟೆಯ ವ್ಯಾಪಾರಿ ವಿಜಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಗ್ರಾಮದವನೇ ಆಗಿರುವ 30 ವರ್ಷದ ಮಾರೇಶ್ ಎಂಬಾತನನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಆತನನ್ನು ಬಂಧಿಸಿದ್ದಾರೆ. ಘಟನೆಯನ್ನು […]

ದೇವರ ಕೋಲು ಮುಟ್ಟಿದ್ದಕ್ಕೆ ಹಲ್ಲೆಗೊಳಗಾದ ದಲಿತ ಬಾಲಕನ ಮನೆಗೆ ಸಮಾಜ ಕಲ್ಯಾಣ ಸಚಿವರ ಭೇಟಿ: ಪರಿಹಾರ ಘೋಷಣೆ

ಕೋಲಾರ: ದೇವರ ಉತ್ಸವದಲ್ಲಿ 14 ವರ್ಷದ ದಲಿತ ಬಾಲಕನೊಬ್ಬ ಉತ್ಸವ ಮೂರ್ತಿಯನ್ನು ಮುಟ್ಟಿದ ಎಂಬ ಕಾರಣಕ್ಕೆ ಆತನನ್ನು ಥಳಿಸಿ, ಆತನ ಕುಟುಂಬಕ್ಕೆ 60 ಸಾವಿರ ರೂಗಳ ದಂಡ ವಿಧಿಸಿರುವ ಘಟನೆ ಕೋಲಾರ ತಾಲೂಕಿನ ಟೇಕಲ್ ಬಳಿಯ ಉಳ್ಳೇರ ಹಳ್ಳಿಯಲ್ಲಿ ನಡೆದಿತ್ತು. ಭೂತಮ್ಮನ ಮೂರ್ತಿ ಉತ್ಸವದ ವೇಳೆ ಕೆಳಕ್ಕೆ ಬಿದ್ದ ದೇವರನ್ನು ಹೊರುವ ಗುಜ್ಜ ಕೋಲನ್ನು ದಲಿತ ಬಾಲಕನೊಬ್ಬ ಎತ್ತಿಕೊಟ್ಟಿದ್ದಕ್ಕೆ ಸಿಟ್ಟಾದ ಕೆಲವರು ಉತ್ಸವ ಮೂರ್ತಿಯನ್ನು ಮುಟ್ಟಿದ ಎಂದು ಆತನನ್ನು ಥಳಿಸಿದ್ದರು. ಬಾಲಕನ ಕುಟುಂಬಕ್ಕೆ 60 ಸಾವಿರ ರೂಗಳ […]