ಕೊಡವೂರು: ಶ್ರಮ ಯೋಜನೆಯ ನೋಂದಣಿ ಕಾರ್ಯಕ್ರಮ

ಕೊಡವೂರು: ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಮತ್ತು ಡಿಜಿಟಲ್ ಸೇವಾ ಕೇಂದ್ರ ಕೊಡವೂರು ಇವರ ಸಹಯೋಗದಲ್ಲಿ ಕೊಡವೂರು ಪರಿಸರದ ಜನರಿಗೆ ಕೇಂದ್ರ ಸರಕಾರದ ಎಲ್ಲಾ ಸವಲತ್ತುಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಶ್ರಮ ಯೋಜನೆಯ ನೋಂದಣಿ ಕಾರ್ಯವನ್ನು ಕೊಡವೂರು ವಿಪ್ರ ಶ್ರೀ ಸಭಾಭವನದಲ್ಲಿ ಆಯೋಜಿಸಲಾಯಿತು. ಕೊಡವೂರು ನಗರಸಭಾ ಸದಸ್ಯ ವಿಜಯ ಕೊಡುವೂರು ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೊಡವೂರು ಪರಿಸರದ ನೂರಾರು ಜನರು ಆಗಮಸಿ, ಯೋಜನೆಯ ಪ್ರಯೋಜನ ಪಡೆದರು.