ಕೊಡವೂರು ಶಂಕರನಾರಾಯಣ ದೇಗುಲ: ಫೆ. 4ಕ್ಕೆ ರಾಶಿಪೂಜಾ ಮಹೋತ್ಸವ; ಹಸಿರು ಹೊರೆಕಾಣಿಕೆ ಸಮರ್ಪಣೆ

ಮಲ್ಪೆ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಫೆ.4 ರಂದು ನಡೆಯಲಿರುವ ರಾಶಿಪೂಜಾ ಮಹೋತ್ಸವದ ಅಂಗವಾಗಿ ಸೋಮವಾರ ವೈಭವದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಮಲ್ಪೆ ಅಯ್ಯಪ್ಪಸ್ವಾಮಿ ಮಂದಿರದಿಂದ ದೇಗುಲದವರೆಗೆ ವೈಭವದ ಮೆರವಣಿಗೆ ಸಾಗಿಬಂತು. ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್ ಪಾಲ್  ಸುವರ್ಣ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ಸಾಗಿಬಂದ ಕೀಲು ಕುದುರೆ, ಕುಣಿತ ಭಜನೆ, ಕುಣಿತ ಚಂಡೆ, ನಾಸಿಕ್ ಬ್ಯಾಂಡ್, ವಿವಿಧ ವೇಷ ಭೂಷಣ, ಕಲಶ ಹಿಡಿದ ಮಹಿಳೆಯರು, ಕಲಾ […]