ಕೊಡವೂರು ಶಂಕರನಾರಾಯಣ ದೇವಸ್ಥಾನ: ರಾಶಿಪೂಜೆಗೆ ಸಕಲ ಸಿದ್ಧತೆ

ಉಡುಪಿ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಫೆ. 4ರಂದು ಲೋಕ ಕಲ್ಯಾಣಾರ್ಥವಾಗಿ ನಡೆಯಲಿರುವ ದೊಂದಿ ಬೆಳಕಿನ ರಾಶಿ ಪೂಜೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಈ ದೊಂದಿ ಬೆಳಕಿನ ರಾಶಿ ಪೂಜೆಯು ದೇವಸ್ಥಾನದ ತಂತ್ರಿ ವೇದಮೂರ್ತಿ ಪುತ್ತೂರು ಹಯವದನ ತಂತ್ರಿಗಳು ಹಾಗೂ ಋತ್ವಿಜರೊಡಗೂಡಿ ಆಗಮೋಕ್ತ ವಿಧಿ ವಿಧಾನಗಳೊಂದಿಗೆ ಫೆ.4 ರ ಸೂರ್ಯೋದಯದಿಂದ ಫೆ.5 ಸೂರ್ಯೋದಯದ ವರೆಗೆ ಈ ದೊಂದಿ ಬೆಳಕಿನ ರಾಶಿ ಪೂಜೆ ನಡೆಯಲಿದೆ. ಬೆಳಿಗ್ಗೆ ರಾಶಿಪೂಜಾ ಕಲಶಾಧಿವಾಸ, ಅಧಿವಾಸ ಯಾಗ, ಸಂಕಲ್ಪ, ಭಾರತೀ ಪೂಜೆ, ಆರೂರು ಶ್ರೀ ವಿಷ್ಣುಮೂರ್ತಿ […]