ಕಿಶೋರ ಯಕ್ಷಗಾನ ಸಂಭ್ರಮ -2022 ಸಮಾರೋಪ ಸಮಾರಂಭ; ಸಾಧಕ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ,ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇವರ ಸಹಯೋಗದೊಂದಿಗೆ ಕಿಶೋರ ಯಕ್ಷಗಾನ ಸಂಭ್ರಮ -2022ರ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನು ನೀಡಿದ ಗುರುಗಳನ್ನು ಸನ್ಮಾನಿಸಿದರು. ಕರ್ನಾಟಕದ ಗಂಡು ಕಲೆಯಾದ ಯಕ್ಷಗಾನವು ಹಿಂದಿನ ಅಶಿಕ್ಷಿತ ಜನತೆಗೆ ದೇವರ ಪರಿಚಯ ಮತ್ತು ಪುರಾಣಗಳ ಸಾರವನ್ನು ತಿಳಿಸಿದೆ. ಈಗಿನ ಪ್ರಜೆಗಳಿಗೆ ಅಧ್ಯಾತ್ಮದ ಬಗ್ಗೆ ತಿಳಿಯಲು ಇದು ಉತ್ತಮವಾದ […]