ನದಿಗೆಸೆದ ಪೂಜಾ ಸಾಮಾಗ್ರಿಗೆ ಕಾಳಿಂಗನ ‘ಸರ್ಪ’ಗಾವಲು!

ಸುಳ್ಯ: ಇಲ್ಲಿನ ನಾಲ್ಕೂರು ಗ್ರಾಮದ ಇಜಿನಡ್ಕದಲ್ಲೊಂದು ವಿಚಿತ್ರ ಘಟನೆ ಅ. 15 ರಂದು ವರದಿಯಾಗಿದೆ. ಗ್ರಾಮಸ್ಥರೊಬ್ಬರು ಮನೆಯ ಪೂಜಾ ಸಾಮಾಗ್ರಿಗಳನ್ನು ನದಿಗೆಸೆದಿದ್ದು, ಇದನ್ನು ಕಾಳಿಂಗ ಸರ್ಪವೊಂದು ಕಾವಲು ಕಾಯುತ್ತಿತ್ತು. ಪೂಜಾ ಸಾಮಾಗ್ರಿಗಳಲ್ಲಿ ಕಾಲುದೀಪ, ಆರತಿ, ಘಂಟೆ, ಹರಿವಾಣ ಮುಂತಾದ ಹಳೆಯ ಪೂಜಾ ಸಾಮಾಗ್ರಿಗಳನ್ನು ಇಜಿನಡ್ಕ ಎಂಬಲ್ಲಿ ನದಿಗೆ ಎಸೆದಿರುವುದನ್ನು ಸ್ಥಳೀಯರು ಗಮನಿಸಿದ್ದರು. ಇದೇ ವೇಳೆ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಅಲ್ಲೇ ಕಾವಲು ಕಾಯುತ್ತಿರುವ ರೀತಿಯಲ್ಲಿ ಇರುವುದನ್ನು ಕೂಡಾ ನೋಡಿದ್ದರು. ಸುದ್ದಿ ತಿಳಿದು ಹಲವಾರು ಜನರು ಸ್ಥಳಕ್ಕಾಗಮಿಸಿದ್ದರೂ, […]