ಖೇಲೋ ಇಂಡಿಯಾ ಮಿಡ್ಲೇ ರಿಲೇಯಲ್ಲಿ ಸ್ತುತಿ ಪಿ ಶೆಟ್ಟಿಗೆ ರಜತ ಪದಕ
ಉಡುಪಿ: ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ ಸ್ತುತಿ ಪಿ ಶೆಟ್ಟಿ ಕಿದಿಯೂರು ಇವರು ಮಿಡ್ಲೇ ರಿಲೇಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾ ರಜತಪದಕವನ್ನು ಪಡೆದಿದ್ದಾರೆ. ಈಕೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ಉಡುಪಿ ಇದರ ಅಥ್ಲೆಟಿಕ್ಸ್ ವಿಭಾಗದ ಕೋಚ್ ಸಮರ್ಥ್ ಸದಾಶಿವ ಇವರಿಂದ ತರಬೇತಿ ಪಡೆಯುತ್ತಿದ್ದಾರೆ. ಸಾಧಕ ವಿದ್ಯಾರ್ಥಿನಿಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ -ಭೋಧಕೇತರ […]
ಅಖಿಲ ಭಾರತ ಕರಾಟೆ ಚಾಂಪಿಯನ್ ಶಿಪ್: ಜಿಲ್ಲಾ ಕರಾಟೆ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ
ಮಣಿಪಾಲ: ಮಹಾರಾಷ್ಟ್ರದ ಪುಣೆಯಲ್ಲಿ ಕರಾಟೆ ಇಂಡಿಯಾ ಸಂಸ್ಥೆ ವತಿಯಿಂದ ಜೂನ್17 ರಿಂದ 19 ರವರೆಗೆ ಆಯೋಜಿಸಲಾಗಿದ್ದ ಅಖಿಲ ಭಾರತ ಕರಾಟೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಗೆದ್ದ ಎಂಟು ಪದಕಗಳಲ್ಲಿ ಐದು ಪದಕಗಳು ಉಡುಪಿ ಜಿಲ್ಲೆಯ ಆಟಗಾರರದ್ದಾಗಿತ್ತು. 2 ಚಿನ್ನ, 2 ಬೆಳ್ಳಿ, 1 ಕಂಚಿನೊಂದಿಗೆ ಜಿಲ್ಲೆಯ ಆಟಗಾರರು ಒಟ್ಟು ಐದು ಪದಕಗಳನ್ನು ತಮ್ಮದಾಗಿಸಿಕೊಂಡರು. ಪದಕ ಗೆದ್ದ ಹಾಗೂ ಭಾಗವಹಿಸಿದ ಎಲ್ಲಾ ಕರಾಟೆ ಆಟಗಾರರಿಗೆ ಉಡುಪಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ವತಿಯಿಂದ ಹಾಗೂ ಮಾಹೆ ಸಹಯೋಗದಲ್ಲಿ […]
ನಕ್ಸಲರ ದಾಳಿಗೆ ಬಲಿಯಾದ ತಂದೆ; ಖೇಲೋ ಇಂಡಿಯಾದಲ್ಲಿ ದಾಖಲೆ ನಿರ್ಮಿಸಿ ಚಿನ್ನ ಗೆದ್ದ ಮಗಳು: ಸುಪ್ರಿತಿ ಕಚ್ಚಪ್ ಗೆಲುವಿನ ಓಟ
ನವದೆಹಲಿ: ತನ್ನ ತಂದೆಯನ್ನು ಕಳೆದುಕೊಂಡಾಗ ಸುಪ್ರಿತಿ ಕಚ್ಚಪ್ ಕೇವಲ ಶಿಶುವಾಗಿದ್ದರು. ತಂದೆ ರಾಮಸೇವಕ್ ಓರಾನ್, ತಾಯಿ ಬಲ್ಮತಿ ದೇವಿ ಮತ್ತು ಅವರ ಐದು ಮಕ್ಕಳು ಝಾರ್ಖಂಡ್ ನ ಬುರ್ಹು ಗ್ರಾಮದ ನಿವಾಸಿಗಳಾಗಿದ್ದರು. ಗ್ರಾಮದ ವೈದ್ಯಕೀಯ ವೈದ್ಯರಾಗಿದ್ದ ಓರಾನ್ 2003 ಡಿಸೆಂಬರ್ ರಾತ್ರಿಯಂದು ಇತರ ನಾಲ್ಕು ಗ್ರಾಮಸ್ಥರೊಂದಿಗೆ ಹತ್ತಿರದ ಹಳ್ಳಿಯ ರೋಗಿಯ ಮನೆಗೆ ಹೋಗಿದ್ದರು. ಆದರೆ ಅವರು ತಿರುಗಿ ವಾಪಾಸು ಮನೆಗೆ ಬರಲೇ ಇಲ್ಲ. ಓರಾನ್ ಮತ್ತು ಇತರ ಗ್ರಾಮಸ್ಥರು ನಕ್ಸಲ್ ದಾಳಿಗೆ ಬಲಿಯಾಗಿ ಶವವಾಗಿ ಪತ್ತೆಯಾಗಿದ್ದರು. ಅವರ […]
ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಳುಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಉಡುಪಿ: ರಾಜ್ಯ ಸರ್ಕಾರದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ ಪ್ರತಿಭಾವಂತ ಮಾಧ್ಯಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ 10,000 ರೂ. ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ನೀಡುತ್ತಿದ್ದು, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ, ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ಕ್ರೀಡಾ ಸಂಸ್ಥೆಗಳು ಆಯೋಜಿಸಿದ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ, ರಾಷ್ಟ್ರೀಯ ಖೇಲೋ ಇಂಡಿಯ ಕ್ರೀಡಾ ಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ ಮತ್ತು ರಾಷ್ಟ್ರೀಯ ಶಾಲಾ ಕ್ರೀಡಾ […]