ಸ್ವಾವಲಂಬನೆಗಾಗಿ ಖಾದಿ-ಕೈಮಗ್ಗ ವಸ್ತ್ರಗಳನ್ನೇ ಹೆಚ್ಚಾಗಿ ಬಳಸಿ: ಅನೀಲ್ ಹೆಗ್ಡೆ ಕರೆ

ಕಿನ್ನಿಗೋಳಿ: ಎಪ್ಪತ್ತೈದನೇ ಸ್ವಾತಂತ್ರೋತ್ಸವದ ಸಂಭ್ರಮದೊಂದಿಗೆ ದ. ಕನ್ನಡ ಮತ್ತು ಉಡುಪಿ ಜಿಲ್ಲೆಯ ನೇಕಾರರಿಗಾಗಿ ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ರಾಜ್ಯ ಸಭಾ ಸದಸ್ಯ ಅನೀಲ್ ಹೆಗ್ಡೆ‌ ಮತ್ತು ಕದಿಕೆ ಟ್ರಸ್ಟ್ ಇವರ ನಬಾರ್ಡ್ ಬೆಂಬಲದೊಂದಿಗೆ ಕೈ ಮಗ್ಗ ಸಪ್ತಾಹ ದಿನಾಚರಣೆ ಆಚರಿಸಲಾಯಿತು. ಖುದ್ದು ಖಾದಿ ಪ್ರಚಾರಕರಾಗಿರುವ ಅನೀಲ್ ಹೆಗ್ಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಸ್ವಾವಲಂಬನೆಗಾಗಿ ಖಾದಿ, ಕೈಮಗ್ಗ ವಸ್ತ್ರಗಳನ್ನೇ ಹೆಚ್ಚಾಗಿ ಬಳಸಿ ಎಂದು ಕರೆ ಕೊಟ್ಟರು. ಈ ಸಂದರ್ಭದಲ್ಲಿ ನಡೆದ ಹಿರಿಯ ನೇಕಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ತಾಳಿಪಾಡಿ ನೇಕಾರ […]