ಬೀದಿ ನಾಯಿ ಕಡಿದರೆ ಅದಕ್ಕೆ ಆಹಾರ ನೀಡುವವರು ವೆಚ್ಚವನ್ನು ಭರಿಸುವ ಜವಾಬ್ದಾರಿ ವಹಿಸಬಹುದು: ಸುಪ್ರೀಂ ಕೋರ್ಟ್
ನವದೆಹಲಿ: ಬೀದಿನಾಯಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರದಂದು ಸರ್ವೋಚ್ಚ ನ್ಯಾಯಾಲಯವು ಸಮಸ್ಯೆಯ ಪರಿಹಾರಕ್ಕೆ ಕರೆ ನೀಡಿತು ಮತ್ತು ಯಾರಾದರೂ ಬೀದಿ ನಾಯಿಗಳಿಂದ ದಾಳಿಗೊಳಗಾದರೆ ಅವುಗಳಿಗೆ ಆಹಾರ ನೀಡುವವರಿಗೆ ಲಸಿಕೆ ಹಾಕುವ ಮತ್ತು ವೆಚ್ಚವನ್ನು ಭರಿಸುವ ಜವಾಬ್ದಾರಿಯನ್ನು ವಹಿಸಬಹುದು ಎಂದು ಸೂಚಿಸಿದೆ. ಜಸ್ಟಿಸ್ ಸಂಜೀವ್ ಖನ್ನಾ ಮತ್ತು ಜೆಕೆ ಮಹೇಶ್ವರಿ ಅವರ ಪೀಠವು ಬೀದಿನಾಯಿಗಳನ್ನು ಸೆರೆಹಿಡಿಯಲು ಮತ್ತು ಮಟ್ಟಹಾಕಲು ಅನುಮತಿ ನೀಡಿದ ಕೇರಳ ಹೈಕೋರ್ಟ್ನ 2015 ರ ತೀರ್ಪಿನ ವಿರುದ್ಧ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಇತರರು […]