ಪಾನಮತ್ತನಾಗಿ ಪೊಲೀಸರೊಂದಿಗೆ ಜೈಲರ್ ನಟನ ಗಲಾಟೆ ಪ್ರಕರಣ: ಜಾಮೀನು ನೀಡಿದ್ದಕ್ಕೆ ಪೊಲೀಸರ ಮೇಲೆ ಹರಿಹಾಯ್ದ ವಿರೋಧ ಪಕ್ಷ ಕಾಂಗ್ರೆಸ್

ಕೊಚ್ಚಿ: ಪಾನಮತ್ತನಾಗಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗಲಾಟೆ ಸೃಷ್ಟಿಸಿದ ಆರೋಪದ ಮೇಲೆ ಬಂಧಿತರಾಗಿರುವ ಜೈಲರ್ ಚಿತ್ರದ ಖಳ ನಟ ವಿನಾಯಕನ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳನ್ನು ಮಾತ್ರ ಹಾಕಿರುವ ಕೇರಳ ಪೊಲೀಸರ ನಡೆಯನ್ನು ವಿರೋಧ ಪಕ್ಷ ಕಾಂಗ್ರೆಸ್ ಖಂಡಿಸಿದೆ. ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಹೆಂಡತಿಯೊಂದಿಗೆ ವಿವಾದದ ಕುರಿತಾಗಿ ಪೊಲೀಸರು ಮಂಗಳವಾರ ಸಂಜೆ ಠಾಣೆಗೆ ಕರೆದಿದ್ದ ಸಂದರ್ಭದಲ್ಲಿ ಎರ್ನಾಕುಲಂ ಟೌನ್ ನಾರ್ತ್ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಇದೀಗ […]