ರಜೌರಿಯಲ್ಲಿ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ: ಹ್ಯಾಂಡ್ಲರ್ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ತೆತ್ತ ‘ಕೆಂಟ್’ ಆರ್ಮಿ ಶ್ವಾನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಮಂಗಳವಾರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸೇನಾ ಯೋಧ ಮತ್ತು ಶಂಕಿತ ಪಾಕಿಸ್ತಾನಿ ಭಯೋತ್ಪಾದಕ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ. ಸ್ಥಳದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರ ಜಾಡು ಹಿಡಿಯುತ್ತಿದ್ದ ಸೈನಿಕರ ತುಕುಡಿಯನ್ನು ಕೆಂಟ್ ಎಂಬ ಆರು ವರ್ಷದ ನಾಯಿ ಮುನ್ನಡೆಸುತ್ತಿತ್ತು. ಆರ್ಮಿಯ ಹೆಣ್ಣು ಶ್ವಾನ ಕೆಂಟ್ ‘ಆಪರೇಷನ್ ಸುಜಲಿಗಲ’ದ ಮುಂಚೂಣಿಯಲ್ಲಿತ್ತು. ಕೆಂಟ್ ಪಲಾಯನ ಮಾಡುವ ಭಯೋತ್ಪಾದಕರ ಜಾಡು ಹಿಡಿಯುತ್ತಾ ಸೈನಿಕರ ತುಕುಡಿಯನ್ನು ಮುನ್ನಡೆಸುತ್ತಿತ್ತು. ಈ ಸಂದರ್ಭ ಭಾರೀ […]