ಮಡಿಕೇರಿ: ತಲಕಾವೇರಿಯಲ್ಲಿ ಕಾವೇರಿ ಮಾತೆಯ ತೀರ್ಥೋದ್ಬವವನ್ನುಕಣ್ತುಂಬಿಕೊಂಡ ಸಹಸ್ರಾರು ಭಕ್ತರು
ಮಡಿಕೇರಿ: ತಾಲೂಕಿನ ತಲಕಾವೇರಿಯಲ್ಲಿ ಮಧ್ಯರಾತ್ರಿ 1.27 ಕ್ಕೆ ಕಾವೇರಿ ತೀರ್ಥೋದ್ಭವವನ್ನು ಸಹಸ್ರಾರು ಜನರು ನೋಡಿ ಕೃತಾರ್ಥರಾದರು. ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯಗಳಿಗೆಯಲ್ಲಿ ಬ್ರಹ್ಮಕುಂಡಿಕೆಯಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ನೆರೆದ ಭಕ್ತರಿಗೆ ದರ್ಶನ ನೀಡಿದಳು. ಹಲವಾರು ಅರ್ಚಕರ, ಪಂಡಿತರ ಮಂತ್ರಘೋಷದ ನಡುವೆ ತೀರ್ಥೋದ್ಭವ ಸಂಭವಿಸಿತು. ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ನಟಿ ಹರ್ಷಿಕಾ ಮತ್ತು ಭುವನ್ ಈ ಸಂದರ್ಭದಲ್ಲಿ ಹಾಜರಿದ್ದು ತೀರ್ಥೋದ್ಭವದ ಪುಣ್ಯಸಂದರ್ಭವನ್ನು ಕಣ್ತುಂಬಿಕೊಂಡರು.