ಕಟಪಾಡಿ:ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆ

ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮದಿನಾಚರಣೆಯ ಪ್ರಯುಕ್ತ ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದಲ್ಲಿ‌ ಇಂದು ಹಮ್ಮಿಕೊಂಡ ನಾರಾಯಣಗುರುಗಳ ಜಾಥಕ್ಕೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಿಂದ ಆರಂಭಗೊಂಡ ಜಾಥವು, ಕಟಪಾಡಿ ಪೇಟೆಯಾಗಿ ಸಾಗಿಬಂದು ರಾಷ್ಟ್ರೀಯ ಹೆದ್ದಾರಿ 66 ಕಲ್ಲಾಪು ಮಾರ್ಗವಾಗಿ ವಿಶ್ವನಾಥ ಕ್ಷೇತ್ರದಲ್ಲಿ ಸಮಾಪನಗೊಂಡಿತು. ಕಟಪಾಡಿ ವಿಶ್ವನಾಥ ಕ್ಷೇತ್ರ ಮತ್ತು ಶ್ರೀ ನಾರಾಯಣ ಗುರು ಸೇವಾದಳ ಜಂಟಿ ಆಶ್ರಯದಲ್ಲಿ ಈ ಜಾಥವನ್ನು ಆಯೋಜಿಸಲಾಗಿತ್ತು‌. ಸಂದೇಶ ಸಾರುವ ಈ ಜಾಥದಲ್ಲಿ ಬಿಲ್ಲವ […]