ಕೊಡೆತ್ತೂರುಗುತ್ತು ಕುಟುಂಬಿಕರಿಗೆ ಕಟೀಲು ದೇಗುಲದ ಅನುವಂಶಿಕ ಆಡಳಿತ ಟ್ರಸ್ಟಿ ಹಕ್ಕು: ಕೋರ್ಟು ತೀರ್ಪು
ಕಿನ್ನಿಗೋಳಿ: ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಟ್ರಸ್ಟಿ ಹಕ್ಕು ಕೊಡೆತ್ತೂರುಗುತ್ತು ಕುಟುಂಬದ ಹಿರಿಯ ಸದಸ್ಯರಿಗೆ ಸೇರಿದ್ದು ಎಂದು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ ಎಂದು ಕೊಡೆತ್ತೂರುಗುತ್ತು ಅರುಣ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಅವರು ಗುರುವಾರದಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಗೋಷ್ಠಿಯಲ್ಲಿ ಮಾತನಾಡಿದರು. ಪುತ್ತಿಗೆ ಗುತ್ತಿನ ಸನತ್ ಕುಮಾರ್ ಶೆಟ್ಟಿ ತಾನು ಕೊಡೆತ್ತೂರುಗುತ್ತಿಗೆ ಸಂಬಂಧಿಸಿದವರು ಎಂದು ಹೇಳಿ ಕಟೀಲು ದೇವಳದ ಟ್ರಸ್ಟಿಯಾಗಲು ಪ್ರಯತ್ನಿಸಿ ಕೊಡೆತ್ತೂರುಗುತ್ತಿಗೆ ಸಲ್ಲಬೇಕಾದ ಹಲವಾರು ಗೌರವ […]
ಕುಳಾಯಿ: ಶ್ರೀ ರಾಘವೇಂದ್ರ ಸ್ವಾಮಿ ಮಠ ಸಂಸ್ಥಾಪನಾ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ
ಕುಳಾಯಿ: ಶ್ರೀ ಪುತ್ತಿಗೆ ಮಠದ ಶಾಖೆ, ನವ ವೃಂದಾವನ ಸೇವಾ ಪ್ರತಿಷ್ಠಾನ ಹಾಗೂ ಶ್ರೀ ರಾಘವೇಂದ್ರ ಸ್ವಾಮಿ ಮಠ ಕುಳಾಯಿ ಹೊಸಬೆಟ್ಟು ಇದರ ಸಂಸ್ಥಾಪನಾ ರಜತ ಮಹೋತ್ಸವದ ಸಂದರ್ಭದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದ ಸಮಾರಂಭವನ್ನು ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕಟೀಲು ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಭಾಗವಹಿಸಿದ್ದರು. ಸಮಾರಂಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ […]