ಕಟೀಲು ದೇವಳದ ಎದುರು ಹೊತ್ತಿ ಉರಿದ ಬಸ್: ಮೂವರು ಪ್ರಾಣಾಪಯದಿಂದ ಪಾರು
ಕಟೀಲು: ಇಲ್ಲಿನ ಪ್ರಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮುಂದೆ ಎಂಆರ್‌ಪಿಎಲ್ ಕಂಪನಿಗೆ ಸೇರಿದ ಬಸ್ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಏಕಾಏಕಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಮೂವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಸುರತ್ಕಲ್ ಸಮೀಪದ ಓಎಂಪಿಎಲ್ ಗೆ ಸಿಬಂದಿಗಳನ್ನು ಕರೆದೊಯ್ಯುವ ಬಸ್ಸು ಮಧ್ಯಾಹ್ನ 2.45ರ ಸುಮಾರಿಗೆ ಕಟೀಲು ದೇವಸ್ಥಾನದ ಎದುರು ರಾಜ್ಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ಏಕಾಏಕಿ ಹೊತ್ತಿ ಉರಿದಿದೆ ಎನ್ನಲಾಗಿದೆ. ಧಗಧಗಿಸುವ […]
ನಟ ಸುದೀಪ್ ರಿಂದ ಕಟೀಲು ದೇವಳಕ್ಕೆ ಭೇಟಿ
ಕಿನ್ನಿಗೋಳಿ: ಇಲ್ಲಿನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕನ್ನಡ ಚಿತ್ರ ನಟ ಕಿಚ್ಚ ಸುದೀಪ್ ಭಾನುವಾರದಂದು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪತ್ನಿ ಪ್ರಿಯಾ ಜೊತೆ ಆಗಮಿಸಿದ್ದ ಸುದೀಪ್, ದೇವಳದಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಕಟೀಲು ಮತ್ತು ಮುಲ್ಕಿಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುದೀಪ್ ಜಿಲ್ಲೆಗಾಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ದೇವಸ್ಥಾನದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸಿತರಿದ್ದರು.