ಕಟಪಾಡಿ: ರಥ ಕೊಡ್ಕೆ ಫ್ರೆಂಡ್ಸ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ರಥ ಕೊಡ್ಕೆ ಫ್ರೆಂಡ್ಸ್ ಕಟಪಾಡಿ ಇದರ ವತಿಯಿಂದ ಜಿ.ಎಸ್.ಬಿ ಸಮಾಜದ ಎಸ್.ಎಸ್.ಎಲ್.ಸಿ ಸಾಧಕರಾದ ಸಂದೀಪ್ ಪೈ, ಸಾತ್ವಿಕ್ ಕಾಮತ್, ಅಮೇಯ ಶೆಣೈ, ವೈಭವಿ ಕಾಮತ್, ಪ್ರಥಮ್ ಕಾಮತ್ ಇವರನ್ನು ಸನ್ಮಾನಿಸಲಾಯಿತು. ರಥ ಕೊಡ್ಕೆ ಫ್ರೆಂಡ್ಸ್ ನ ಮಿತ್ರರಾದ ಏಕನಾಥ ಭಟ್, ಶ್ರೀನಿವಾಸ್ ಶೆಣೈ, ದಿವಾಕರ್ ಭಟ್,ವಿನೋದ್ ಕಾಮತ್,ಗಜಾನನ ಶೆಣೈ, ಶ್ರೀನಾಥ್ ಶೆಣೈ, ವೇದಾಂತ ಭಟ್, ಸುಧೀರ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
24ನೇ ವರ್ಷದ ತ್ರಿಶಾ ದಿನಾಚರಣೆ: ಎರಡು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನಡೆಸಿದ ಸಾಧನೆ
ಉಡುಪಿ: ಬದುಕಿನಲ್ಲಿ ಇದಿರಾದ ಕಾಠಿಣ್ಯವನ್ನೆಲ್ಲಾ ಸವಾಲಾಗಿ ಸ್ವೀಕರಿಸಿ ಎರಡು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ವಿದ್ಯಾರ್ಥಿ ಸಂದೋಹವನ್ನು ಸಲಹಿದ ಮತ್ತು ಸಲಹುತ್ತಿರುವ ತ್ರಿಶಾ ಸಂಸ್ಥೆಯು 24 ವರುಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ಆಯೋಜಿಸಿದ್ದ ತ್ರಿಶಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್, ಈ ಸುಧೀರ್ಘ ಪಯಣದಲ್ಲಿ ಸೋಲು-ಗೆಲುವುಗಳನ್ನು ಜೊತೆ ಸೇರಿಸಿಕೊಂಡು ಮುಂದೆ ಸಾಗುವುದು ಹೇಗೆ ಎನ್ನುವುದನ್ನು ಜೀವನ ಕಲಿಸಿಕೊಟ್ಟಿದೆ ಎಂದು ತಮ್ಮ ಜೀವನದ […]