ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು, ಅಲ್ಲಿನ ಜನರೇ ಭಾರತದೊಂದಿಗೆ ವಿಲೀನಗೊಳ್ಳುವ ಬೇಡಿಕೆ ಇಟ್ಟಿದ್ದಾರೆ: ರಾಜನಾಥ್ ಸಿಂಗ್
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದ (POK) ಜನರೇ ಭಾರತದೊಂದಿಗೆ ವಿಲೀನಗೊಳ್ಳುವ ಬೇಡಿಕೆಯನ್ನು ಎತ್ತುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಭಾನುವಾರ ಹೇಳಿದ್ದಾರೆ. ಪಿಒಕೆ ಜನರು ಭಾರತದೊಂದಿಗೆ ವಿಲೀನಗೊಳ್ಳುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಇತ್ತೀಚಿನ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜನಾಥ್ ಸಿಂಗ್, ” ಅವರು ಎಂದಾದರೂ ಕಾಶ್ಮೀರವನ್ನು ಪಡೆಯಬಹುದೆ? ಅವರು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಚಿಂತಿಸಬೇಕು. ದಾಳಿ ಮಾಡುವ […]
ಮನೆ ಬಾಗಿಲಲ್ಲೆ ಪಡೆಯಬಹುದು ಬಾಬಾ ಬರ್ಫಾನಿ ಪ್ರಸಾದ: ಆನ್ ಲೈನ್ ಪೂಜೆ ಸೇವೆ ಪ್ರಾರಂಭಿಸಿದ ಅಮರನಾಥ ಆಡಳಿತ ಮಂಡಳಿ
ಜಮ್ಮು: ಶ್ರೀ ಅಮರನಾಥ ದೇವಾಲಯ ಮಂಡಳಿಯು ಈ ವರ್ಷ ಹಿಮಾಲಯದ ಗುಹಾ ದೇಗುಲಕ್ಕೆ ಬರಲು ಸಾಧ್ಯವಾಗದ ಭಕ್ತರಿಗೆ ಆನ್‌ಲೈನ್ ಪೂಜೆ, ಹವನ ಮತ್ತು ಪ್ರಸಾದ ಸೇವೆಗಳನ್ನು ಘೋಷಿಸಿದೆ. ಆನ್‌ಲೈನ್ ಸೇವೆಗಳನ್ನು ತನ್ನ www.shriamarnathjishrine.com ವೆಬ್‌ಸೈಟ್ ಅಥವಾ ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದಾದ ಅದರ ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು ಆಡಳಿತ ಮಂಡಳಿ ತಿಳಿಸಿದೆ. ಪೂಜೆಗೆ 1,100 ರೂ ನಿಗದಿಪಡಿಸಲಾಗಿದೆ. ಭಕ್ತಾದಿಗಳ ಹೆಸರಿನಲ್ಲಿ ಪುರೋಹಿತರು ಪೂಜೆ ಮತ್ತು ಹವನಗಳನ್ನು ನಡೆಸುತ್ತಾರೆ ಮತ್ತು ಭಕ್ತರು ಆನ್‌ಲೈನ್ ಮೂಲಕ […]
ಕಾಶ್ಮೀರದ ಭಯೋತ್ಪಾದಕ ಬೆಂಗಳೂರಿನಲ್ಲಿ ಬಂಧನ: ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಕಾಶ್ಮೀರದ ಭಯೋತ್ಪಾದಕ ತಾಲಿಬ್ ಹುಸೇನ್ ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಬಳಿಕ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. “ಬೆಂಗಳೂರಿನಲ್ಲಿ ಆತನಿಗೆ ಯಾರು ಆಶ್ರಯ ನೀಡಿದ್ದಾರೆ, ಆತ ಎಲ್ಲಿ ಉಳಿದುಕೊಂಡಿದ್ದಾನೆ ಮತ್ತು ಯಾವ ಸಂಘಟನೆಗಳು ಅಥವಾ ಜನರು ಆತನನ್ನು ಬೆಂಬಲಿಸುತ್ತಿದ್ದಾರೆ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ. ಭದ್ರತಾ ಕಾರಣಗಳಿಗಾಗಿ ನಡೆಯುತ್ತಿರುವ ತನಿಖೆಯ ವಿವರಗಳನ್ನು […]
ಕಾಶ್ಮೀರಿ ಪಂಡಿತರ ಉದ್ದೇಶಿತ ಹತ್ಯೆಗೆ ಒಂದು ವರ್ಷದ ಹಿಂದೆಯೆ ರೂಪಿಸಲಾಗಿತ್ತು ಸಂಚು? ಗುಪ್ತಚರ ಮೂಲಗಳಿಂದ ಬಯಲಾಯ್ತು ಸತ್ಯ
ನವದೆಹಲಿ: ಭಾರತೀಯ ಗುಪ್ತಚರ ಸಂಸ್ಥೆಗಳ ಮೂಲಗಳ ಪ್ರಕಾರ ಕಾಶ್ಮೀರದಲ್ಲಿ ಪಂಡಿತರ ಉದ್ದೇಶಿತ ಹತ್ಯೆಗೆ ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮುಜ಼ಫ್ಫರಾಬಾದ್ ನಲ್ಲಿ ಕುಳಿತು ಈ ಹತ್ಯೆಗೆ ಉಗ್ರರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. 21 ಸೆಪ್ಟಂಬರ್ 2021 ರಂದು ಮುಜ಼ಫ್ಫರಾಬಾದ್ ನಲ್ಲಿ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐ ಎಸ್ ಐ ನ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಿಒಕೆಯ ಭಯೋತ್ಪಾದಕ ಸಂಘಟನೆಗಳ ಜೊತೆಗೂಡಿ ಕಾಶ್ಮೀರ ಪಂಡಿತರ ಉದ್ದೇಶಿತ […]