ಕಾರ್ಕಳ: ಕಾಲೇಜು ಉಪನ್ಯಾಸಕಿ ನೇಣಿಗೆ ಶರಣು
ಕಾರ್ಕಳ: ಕಾಲೇಜಿನ ಉಪನ್ಯಾಸಕಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಪೆರ್ವಾಜೆ ಎಂಬಲ್ಲಿ ನಡೆದಿದೆ. ಇನ್ನಾ ಗ್ರಾಮಕರಣೀಕರ ರವಿಶಂಕರ್ ಅವರ ಪತ್ನಿ ಕಾರ್ಕಳ ಎಸ್ ವಿಟಿ ಕಾಲೇಜಿನ ಉಪನ್ಯಾಸಕಿ ಮಮತಾ ಶೆಟ್ಟಿ (42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ಇಂದು ತಮ್ಮ ಸ್ವಗೃಹದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತಿ, ಓರ್ವ ಪುತ್ರನನನ್ನು ಅಗಲಿದ್ದಾರೆ.