ಕಾರ್ಕಳ: ಅಣ್ಣನ ಉತ್ತರ ಕ್ರಿಯೆಯ ಸಿದ್ಧತೆ; ವಿದ್ಯುತ್ ಪ್ರವಹಿಸಿ ಸಹೋದರಿ ಮೃತ್ಯು
ಉಡುಪಿ: ಅಣ್ಣನ ಉತ್ತರ ಕ್ರಿಯೆ ಸಿದ್ಧತೆ ವೇಳೆ ವಿದ್ಯುತ್ ಪ್ರವಹಿಸುತ್ತಿದ್ದ ಶಾಮಿಯಾನ ಕಂಬ ಸ್ಪರ್ಶಿಸಿ ಸಹೋದರಿ ಮೃತಪಟ್ಟ ದಾರುಣ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಸಂಭವಿಸಿದೆ. ನಿಟ್ಟೆ ಗ್ರಾಮದ ಲಲಿತಾ (59) ಮೃತ ದುರ್ದೈವಿ. ಇವರು ತನ್ನ ಅಣ್ಣ ರಾಘು ಬೋಂಟ್ರ ಎಂಬವರ ಉತ್ತರ ಕ್ರಿಯೆಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ಧತೆ ನಡೆದಿದ್ದು ಗುರುವಾರ ರಾತ್ರಿ 9 ಗಂಟೆ ವೇಳೆಗೆ ರಾಘು ಬೋಂಟ್ರ ಅವರ ತಂಗಿ ಶಾಮಿಯಾನದ ಆಧಾರಕ್ಕೆಂದು ಅಳವಡಿಸಿದ್ದ ಕಂಬ ಸ್ಪರ್ಶಿಸಿದ್ದರು. ಆ ಕಂಬದಲ್ಲಿ ವಿದ್ಯುತ್ […]