ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಗೆ ₹5 ಸಾವಿರ ದಂಡ ವಿಧಿಸಿದ ಕಾರ್ಕಳ ಪೊಲೀಸರು; ಸಾರ್ವಜನಿಕರಿಂದ ಪ್ರಶಂಸೆ

ಕಾರ್ಕಳ: ಇಲ್ಲಿನ ಕರಿಯಕಲ್ಲು ಎಂಬಲ್ಲಿ ಆಟೋ ರಿಕ್ಷಾದಲ್ಲಿ ಬಂದು ತ್ಯಾಜ್ಯ ಎಸೆದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಕಾರ್ಕಳ ನಗರ ಠಾಣೆ ಪೊಲೀಸರು ಐದು ಸಾವಿರ ದಂಡ ವಿಧಿಸಿದ ಘಟನೆ ನಡೆದಿದೆ. ಕರಿಯಕಲ್ಲು ನಿವಾಸಿ ಕಥಲ್‌ ಸಾಹೇಬ್‌ ಎಂಬವರು ಮಾ. 23ರ ಬೆಳಿಗ್ಗೆ ಕಸ ಬಿಸಾಡಿದ್ದರು. ಅದನ್ನು ನೋಡಿದ ಸ್ವಚ್ಛ ಬ್ರಿಗೇಡ್ ಸದಸ್ಯರು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಅದರಂತೆ ಇಂದು (ಮಾ. 25) ಕಥಲ್‌ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ ಪೊಲೀಸರು ಆತನಿಂದ […]