ಕಾರ್ಕಳ: ಹಾರೆಯಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ

ಕಾರ್ಕಳ: ಹಾರೆಯಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಕಾರ್ಕಳದ ಮಾಳ ಗ್ರಾಮದ ಮುಕ್ಕಾಯಿ ಎಂಬಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು‌ ಮಿಯ್ಯಾರು ಗ್ರಾಮದ ಬೋರ್ಕಟ್ಟೆ ನಿವಾಸಿ ಹರೀಶ್‌ ಪೂಜಾರಿ (42) ಎಂದು ಗುರುತಿಸಲಾಗಿದೆ. ಗುರುವ ಕೊಲೆಗೈದ ಆರೋಪಿ. ಹರೀಶ್ ಪೂಜಾರಿ‌ ಹಾಗೂ ಗುರುವ ಇಬ್ಬರೂ ಕಳೆದ ಏಳು ತಿಂಗಳಿನಿಂದ ಮಾಳದ ರೀತಾ ಎಂಬ ಮಹಿಳೆಯ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಹರೀಶ್‌ ವಿದ್ಯುತ್‌ ಕಂಬ ಹಾಕುವ ಕೆಲಸ ಮಾಡಿಕೊಂಡಿದ್ದರೆ, ರೀತಾ ಹಾಗೂ ಗುರುವ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮೇ 23ರಂದು […]