ಕಾರ್ಕಳ: ಬಾವಿಗೆ ಬಿದ್ದು ವಿಲವಿಲ ಒದ್ದಾಡಿದ ಚಿರತೆ
ಕಾರ್ಕಳ: ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಾರ್ಕಳ ತಾಲೂಕಿನ ಮಾಳ ಹುಕ್ರಟ್ಟೆಯ ಫ್ಲೋರಿನ್ ಮಿನೆಜಸ್ ಎಂಬವರ ತೋಟದಲ್ಲಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಹುಕ್ರಟ್ಟೆ ಸಮೀಪದ ಮನೆಗಳಲ್ಲಿ ಸಾಕು ನಾಯಿಗಳು ಕಾಣೆಯಾಗುತ್ತಿದ್ದವು. ಹೀಗಾಗಿ ಚಿರತೆ ನಾಯಿಯನ್ನು ಅಟ್ಟಿಸಿಕೊಂಡು ಬಂದು ಬಾವಿಗೆ ಬಿದ್ದಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.