ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆ: ದಿ. ಗೋಪಶೆಟ್ಟಿ ಜನ್ಮಶತಾಬ್ದಿ ಅಂಗವಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮ
ಕಾರ್ಕಳ: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಹಲವಾರು ಮೈಲುಗಲ್ಲುಗಳನ್ನು ಸಾಧಿಸುತ್ತಾ ನಾಡಿನ ಹೆಮ್ಮೆಯ ಕಾಲೇಜಾಗಿ ಹೊರಹೊಮ್ಮಿದೆ. ಪ್ರಸಕ್ತ ವರ್ಷ ಸಂಸ್ಥೆಯ ಸಂಸ್ಥಾಪಕರಾದ ದಿ. ಗೋಪಶೆಟ್ಟಿಯವರ ಜನ್ಮಶತಾಬ್ದಿ ವರ್ಷ. ಜೊತೆಗೆ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವದ ಸಂಭ್ರಮ. ಈ ಸ್ಮರಣೀಯ ಸಂದರ್ಭ ಉಡುಪಿಯ ಕಡಿಯಾಳಿ ಬಳಿಯಿರುವ ನಾಗಬನ ಕ್ಯಾಂಪಸ್‍ನಲ್ಲಿ ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜನ್ನು ಪ್ರಾರಂಭಿಸಿರುವುದು ಹರ್ಷದಾಯಕ ಸಂಗತಿ. ಈ ಎಲ್ಲಾ ಸಂಭ್ರಮಕೆ ಮೆರುಗು ಎನ್ನುವಂತೆ ಇದೇ ತಿಂಗಳ 21ರ […]