ಕಾರ್ಕಳ: ಭಾರೀ ಗಾಳಿಮಳೆಗೆ ರಿಕ್ಷಾದ ಮೇಲೆ ಉರುಳಿಬಿದ್ದ ಮರ; ಪವಾಡ ಸದೃಶ ರೀತಿಯಲ್ಲಿ ಆಟೊ ಚಾಲಕ ಪಾರು

ಉಡುಪಿ: ಕಾರ್ಕಳದಲ್ಲಿ ಸುರಿದ ಭಾರಿ ಗಾಳಿಮಳೆಗೆ ಹಲವಾರು ಕಡೆಗಳಲ್ಲಿ ಮರ ಉರುಳಿ ಅನಾಹುತ ಸಂಭವಿಸಿದೆ.ಕಾರ್ಕಳ ಬಸ್ ನಿಲ್ದಾಣದ ಬಳಿ ಬೃಹತ್ ಗಾತ್ರದ ಆಲದ ಮರವೊಂದು ರಿಕ್ಷಾದ ಮೇಲೆ ಬಿದ್ದು ರಿಕ್ಷಾ ಜಖಂಗೊಂಡಿದೆ. ಆಟೊ ಚಾಲಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಅಲ್ಲದೇ ವಿದ್ಯುತ್ ಕಂಬವೊಂದು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದು ದ್ವಿಚಕ್ರ ವಾಹನ ಪೂರ್ತಿ ಜಖಂಗೊಂಡಿದೆ. ಮರದ ಜೊತೆಗೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯ ಉಂಟಾಯಿತು. ಹಲವು ವಿದ್ಯುತ್ […]