ಕಾರ್ಕಳ: ಮಹಿಳೆಯಿಂದ ಲಕ್ಷಾಂತರ ರೂಪಾಯಿ ದೋಚಿದ ಖದೀಮ

ಕಾರ್ಕಳ: ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಖದೀಮನೊಬ್ಬ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಜಯಮ್ಮ (64) ವಂಚನೆಗೆ ಒಳಗಾದವರು. ಇವರಿಗೆ ಬ್ರೋಕರ್ ಒಬ್ಬರ ಮೂಲಕ 2019ರಲ್ಲಿ ಮಂಗಳೂರು ಕೊಟೆಕ್ಯಾರ್ ನಿವಾಸಿ ಅಬ್ದುಲ್ ಖಾದರ್ ಎಂಬಾತನ ಪರಿಚಯವಾಗಿತ್ತು. ಈತ ಜಯಮ್ಮನವರ ಇಬ್ಬರು ಮಕ್ಕಳಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರಿಂದ ₹9.60 ಲಕ್ಷ ಹಣವನ್ನು ಬ್ಯಾಂಕ್ ಖಾತೆ ವರ್ಗಾವಣೆ ಮಾಡಿಸಿಕೊಂಡಿದ್ದನು. ಅಲ್ಲದೆ, ₹ 5 ಲಕ್ಷ ಹಣವನ್ನು ನೇರವಾಗಿ ಪಡೆದುಕೊಂಡಿದ್ದನು.ಆದರೆ, ಈವರೆಗೂ ಮಕ್ಕಳಿಗೆ ಉದ್ಯೋಗ […]