ಕಾರ್ಕಳ: ಹಗ್ಗ ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ವ್ಯಕ್ತಿ ಬಾವಿಗೆ ಬಿದ್ದು ಮೃತ್ಯು
ಕಾರ್ಕಳ: ಬಾವಿಯ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಲು ಹೋದಂತಹ ವ್ಯಕ್ತಿ, ನೇಣಿನ ಗಂಟು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮಾಳ ಗ್ರಾಮದ ಮಂಜಲ್ತಾರು ಕಡಾರಿ ಬಳಿ ನಡೆದಿದೆ. ಕಡಾರಿ ಬಳಿ ನಿವಾಸಿ ಸುಂದರಿ ಎಂಬವರ ಮಗ ಭೋಜ (37) ನೇಣಿಗೆ ಶರಣಾದ ವ್ಯಕ್ತಿ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಜೀವನದಲ್ಲಿ ಜುಗುಪ್ಪೆಗೊಂಡು ಮನೆ ಸಮೀಪದ ಬಾವಿಯ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದರು. ಈ ವೇಳೆ ನೇಣಿನ ಗಂಟು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. […]