ಕಾಪು: ಹಾವು ಕಚ್ಚಿ ಯುವಕ ಮೃತ್ಯು
ಕಾಪು: ಬಲೀಂದ್ರ ಪೂಜೆಯ ಪ್ರಯುಕ್ತ ಗದ್ದೆಯಲ್ಲಿ ಪೂಜೆ ನಡೆಸಲು ಹೋಗಿದ್ದ ವೇಳೆ ಹಾವು ಕಚ್ಚಿ ಯುವಕ ಮೃತಪಟ್ಟ ಘಟನೆ ಕಾಪುವಿನಲ್ಲಿ ಶುಕ್ರವಾರ ನಡೆದಿದೆ. ಮೃತನನ್ನು ಕಾಪು ಕಲ್ಯ ನಿವಾಸಿ ರೋಹಿತ್ ಕುಮಾರ್ (26) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ರೋಹಿತ್ ಕುಮಾರ್ ಮತ್ತು ಸಹೋದರರು ಬಲೀಂದ್ರ ಪೂಜೆಗಾಗಿ ಗದ್ದೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರಿಗೆ ವಿಷ ಜಂತು ಕಚ್ಚಿದ್ದು, ಮನೆಯವರು ಕೂಡಲೇ ನಾಟಿ ವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಇದರಿಂದ ಚೇತರಿಸಿಕೊಂಡಿದ್ದ ರೋಹಿತ್, ಶುಕ್ರವಾರ ಸಂಜೆ […]