ಕಾಪು: ಅಂಗಡಿಗೆ ನುಗ್ಗಿದ ಕಾರು; ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ.!
ಕಾಪು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಅಂಗಡಿಗೆ ನುಗ್ಗಿದ ಘಟನೆ ಕಾಪು ಮಲ್ಲಾರು ಸ್ವಾಗತ ನಗರದ ಬಳಿ ಇಂದು ನಡೆದಿದೆ. ಕಾರು ನುಗ್ಗಿದ ರಭಸಕ್ಕೆ ಅಂಗಡಿಯ ಒಂದು ಪಾರ್ಶ್ವದ ಗೋಡೆ ನೆಲಕ್ಕುರುಳಿದ್ದು, ಅಂಗಡಿಯಲ್ಲಿದ್ದ ಮಾಲೀಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರು ಕುಂದಾಪುರ ವ್ಯಕ್ತಿಗೆ ಸೇರಿದ್ದು, ಅವರು ಶಿರ್ವ ಕಡೆಯಿಂದ ಕಾಪುವಿನತ್ತ ತೆರಳುತ್ತಿದ್ದರು. ಈ ವೇಳೆ ಮಲ್ಲಾರು ಸ್ವಾಗತ ನಗರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಂಗಡಿಗೆ ನುಗ್ಗಿದೆ.