ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಸಿ.ಜಯರಾಂ ನಿಧನ

ಬೆಂಗಳೂರು: ‘ಆಟೋರಾಜ’, ‘ನಾ ನಿನ್ನ ಬಿಡಲಾರೆ’ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಸಿ.ಜಯರಾಂ ಅವರು ಇಂದು ನಸುಕಿನಲ್ಲಿ ನಿಧನರಾದರು. ‘ಪಾವನ‌ ಗಂಗ’, ‘ಗಲಾಟೆ ಸಂಸಾರ’, ‘ಆಟೋರಾಜ’, ‘ನಾ ನಿನ್ನ ಬಿಡಲಾರೆ’ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ಸಿ.ಜಯರಾಂ ಅವರು ನಿರ್ಮಿಸಿದ್ದರು. ಅವರ ಪುತ್ರ ಮಿಲನ ಪ್ರಕಾಶ್ ಅವರು ಕೂಡ ಚಿತ್ರ ನಿರ್ದೇಶಕರಾಗಿದ್ದಾರೆ.