ಕನ್ನಡದ ಹಿರಿಯ ನಟ ಸೋಮಶೇಖರ ರಾವ್ ನಿಧನ

ಬೆಂಗಳೂರು: ಹಿರಿಯ ಕಲಾವಿದ ಎಚ್‌.ಜಿ. ಸೋಮಶೇಖರ ರಾವ್ (86) ಅವರು ಮಂಗಳವಾರ ನಿಧನ ಹೊಂದಿದರು. ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ಈ ಮೂರು ಕ್ಷೇತ್ರದಲ್ಲಿ ಮಿಂಚಿದ್ದ ಸೋಮಶೇಖರ್ ರಾವ್, ಈಚೆಗೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಎರಡು ದಿನಗಳಿಂದ ಅಸ್ವಸ್ಥರಾಗಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ತಪಾಸಣೆ ನಡೆಸುವ ಮುನ್ನವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಹೋದರ ನಟ ದತ್ತಣ್ಣ ಜತೆ ಸೋಮಶೇಖರ್ ರಾವ್ ಹಿರಿಯ ಚಲನಚಿತ್ರ ನಟ ದತ್ತಣ್ಣ (ದತ್ತಾತ್ರೇಯ) ಅವರ ಸಹೋದರರಾಗಿರುವ ಸೋಮಶೇಖರ ರಾವ್, […]