ಕಂಚಿನಡ್ಕ ನೂತನ ಟೋಲ್ ಗೇಟ್ ಗೆ ಟೆಂಪೋ ಲಾರಿ ಮಾಲೀಕರಿಂದ ವಿರೋಧ
ಉಡುಪಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಕಂಚಿನಡ್ಕ ಎಂಬಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟೋಲ್ ಗೇಟ್ ವಿರುದ್ಧ ಟೆಂಪೋ ಮತ್ತು ಲಾರಿ ಚಾಲಕರ ಸಂಘ ಪ್ರತಿಭಟನೆಗೆ ಸಜ್ಜಾಗಿದೆ. ಇದೇ ತಿಂಗಳ 24ರಂದು ಹೊಸ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಸಂಘಟಕ ರಾಘವೇಂದ್ರ ಶೆಟ್ಟಿ ಹೇಳಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಮೂರು ಟೋಲ್ ಗೇಟ್ ಗಳಿದ್ದು ಪಕ್ಕದ ದಕ್ಷಿಣ ಕನ್ನಡದಲ್ಲೂ ಟೋಲ್ ಗೇಟ್ ಗಳಿವೆ. ಪ್ರಕೃತಿ ವಿಕೋಪ, ದಿನ ವಸ್ತುಗಳ […]