ಹೆಬ್ರಿ: ಬರೋಬ್ಬರಿ 15 ಅಡಿ ಉದ್ದ 12.50 ಕೆಜಿ ತೂಕದ ಕಾಳಿಂಗ ಸರ್ಪ ಪತ್ತೆ; ಇದು ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಸಮಯ

ಹೆಬ್ರಿ: ಬರೋಬ್ಬರಿ 15 ಅಡಿ ಉದ್ದದ 12.5 ಕೆಜಿ ತೂಕದ ಕಾಳಿಗ ಸರ್ಪವೊಂದು ಹೆಬ್ರಿ ತಾಲೂಕಿನ ನಾಡ್ಪಾಲ್ ಗ್ರಾಮದಲ್ಲಿ ಕಾಣಸಿಕ್ಕಿದೆ. ಹೆಬ್ರಿಯ ಸೀತಾ ನದಿ ತೀರದಲ್ಲಿರುವ ಭಾಸ್ಕರ್​ ಶೆಟ್ಟಿ ಎಂಬವರ ಮನೆಯ ಸಮೀಪ ಕಾಳಿಂಗವೊಂದು ಪ್ರತ್ಯಕ್ಷವಾಗಿದೆ. ಇದರ ಬಗ್ಗೆ ಮಾಹಿತಿ ಪಡೆದ ಉರಗತಜ್ಞ ಡಾ.ಗೌರಿ ಶಂಕರ್ ತಮ್ಮ ಸಹೋದ್ಯೋಗಿಗಳ ಜೊತೆಗೆ ಸ್ಥಳಕ್ಕೆ ತೆರಳಿದ್ದಾರೆ. ತೋಡಿಗೆ ಹಾಕುವ ದೊಡ್ಡ ಪೈಪ್​ನಡಿಯಲ್ಲಿ ಕಾಳಿಂಗ ಪತ್ತೆಯಾಗಿದೆ. ಡಾ. ಗೌರಿ ಶಂಕರ್ ಆಗುಂಬೆಯ ಕಾಳಿಂಗ ಮನೆಯಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಕಾಳಿಂಗ ಸರ್ಪಗಳ ವಂಶಾವಳಿಯ […]