ಭೂಕುಸಿತ ನಿರಂತರ: ಉತ್ತರಾಖಂಡದ ಜೋಶಿಮಠವಿನ್ನು ‘ಜೀವಿಸಲು ಅಸುರಕ್ಷಿತ’; ಸರ್ಕಾರದ ಘೋಷಣೆ
ಜೋಶಿಮಠ: ಮಾನವನ ದುರಾಸೆ ಮತ್ತು ಅಸಡ್ಡೆಗೆ ಬಲಿಯಾದ ಸನಾತನ ಧರ್ಮದ ಅತ್ಯಂತ ಪವಿತ್ರ ಆಧ್ಯಾತ್ಮಿಕ ಸ್ಥಳವಿನ್ನು ಜೀವಿಸಲು ‘ಅಸುರಕ್ಷಿತ’ ಎನ್ನುವ ಹಣೆಪಟ್ಟಿಯನ್ನು ಅಧಿಕೃತವಾಗಿ ಪಡೆದುಕೊಂಡಿದೆ. ಉತ್ತರಾಖಂಡ ಸರ್ಕಾರವು ಜೋಶಿಮಠದ ಎಲ್ಲಾ ಒಂಬತ್ತು ಪುರಸಭೆಯ ವಾರ್ಡ್‌ಗಳನ್ನು ವಿಪತ್ತು ನಿರ್ವಹಣಾ ಕಾಯಿದೆಯಡಿ ‘ವಿಪತ್ತು ಪೀಡಿತ’ ಮತ್ತು ‘ಜೀವನಕ್ಕೆ ಅಸುರಕ್ಷಿತ’ ಎಂದು ಘೋಷಿಸಿದೆ. ಹಿಮಾಲಯದ ತಪ್ಪಲಿನ ಪವಿತ್ರ ನಗರದಲ್ಲಿ 600 ಕ್ಕೂ ಹೆಚ್ಚು ಮನೆಗಳಲ್ಲಿ ಹಾಗೂ ಇಲ್ಲಿನ ಪುರಾತನ ದೇವಸ್ಥಾನಗಳಲ್ಲಿ ಬಿರುಕುಗಳನ್ನು ಉಂಟುಮಾಡಿದ ಭೂಕುಸಿತದಿಂದ ಹೆಚ್ಚುತ್ತಿರುವ ಬೆದರಿಕೆಯ ದೃಷ್ಟಿಯಿಂದ ಈ ನಿರ್ಧಾರ […]
ಹಿಮಾಲಯದ ತಪ್ಪಲಿನ ಉತ್ತರಾಖಂಡದಲ್ಲಿ ಕುಸಿಯುತ್ತಿದೆ ಭೂಮಿ: ನಗರೀಕರಣದಿಂದಾಗಿ ನಲುಗಿತು ಜೀವನ
ಜೋಶಿಮಠ: ಹಿಮಾಲಯದ ತಪ್ಪಲಿನ ಈ ಪಟ್ಟಣವು ಕುಸಿಯುತ್ತಿದೆ. ಇಲ್ಲಿನ ರಸ್ತೆ, ಮನೆ, ಶಾಲೆ ಕಾಲೇಜು, ಕೃಷಿ ಭೂಮಿಯಲ್ಲಿ ಭೂಮಿ ಬಾಯ್ದೆರೆದು ದೊಡ್ಡ ವಿಕೋಪವೊಂದಕ್ಕೆ ನಾಂದಿ ಹಾಡಲು ತಯಾರಾಗಿ ನಿಂತಿದೆ. ಇಲ್ಲಿನ 561 ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಸುಮಾರು 66 ಕುಟುಂಬಗಳು ಈ ಜಾಗವನ್ನು ತೊರೆದು ಬೇರೆ ಸುರಕ್ಷಿತ ಸ್ಥಳಕ್ಕೆ ತೆರಳಿದೆ. ಸಿಂಗಧಾರ್ ಮತ್ತು ಮಾರವಾಡಿ ಎಂಬ ಸ್ಥಳಗಳಲ್ಲಿ ಬಿರುಕುಗಳು ಹೆಚ್ಚಾಗುತ್ತಿವೆ. ಮನೆ ಮಾತ್ರವಲ್ಲ ಇಲ್ಲಿನ ರಸ್ತೆಗಳಲ್ಲಿಯೂ ಬಿರುಕುಗಳು ಕಾಣಿಸಿಕೊಂಡಿವೆ. ಜೋಶಿಮಠದ 9 ವಾರ್ಡುಗಳಲ್ಲಿ ಬೃಹತ್ ಪ್ರಮಾಣದ ಪರಿಣಾಮಗಳಾಗಿವೆ. […]