ಕುಂದಾಪುರ: ಜಿಲ್ಲಾ ಇತಿಹಾಸದಲ್ಲೇ ಮೊದಲ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಹಬ್ಬ- ಜಾನ್ಸನ್ ಟ್ರೋಫಿ ಇಂದಿನಿಂದ ಪ್ರಾರಂಭ
ಕುಂದಾಪುರ: ಜಾನ್ಸನ್ ಕ್ರಿಕೆಟರ್ಸ್ ಹಂಗಳೂರು ಇವರ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾಟ ಜಾನ್ಸನ್ ಟ್ರೋಫಿ ಇಲ್ಲಿನ ಗಾಂಧೀ ಮೈದಾನದಲ್ಲಿ ಶುಕ್ರವಾರ ಸಂಜೆ 7 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಜಾನ್ಸನ್ ಕ್ರಿಕೆಟರ್ಸ್ ಹಂಗಳೂರು ಇದರ ಅಧ್ಯಕ್ಷ ರವೀಂದ್ರ ಹೆಗ್ಡೆ ಹೇಳಿದರು. ಬುಧವಾರ ಕುಂದಾಪುರ ಪ್ರೆಸ್ಕ್ಲಬ್ನಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿ, ಪಂದ್ಯಾಟದ ಎರಡನೇ ದಿನವಾದ ಡಿ. 30ರ ಶುಕ್ರವಾರ ಸಂಜೆ 7 ಗಂಟೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ […]