ಮಂಗಳೂರು: ಯುರೋಪ್ ದೇಶದಲ್ಲಿ ಪುರುಷ ಹಾಗೂ ಮಹಿಳಾ ಟ್ರಕ್ ಡ್ರೈವರ್ ನೇಮಕಾತಿಗಾಗಿ ಅರ್ಜಿ ಆಹ್ವಾನ

ಮಂಗಳೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುರೋಪ್ ದೇಶದಲ್ಲಿ ಡ್ರೈವರ್ ಗಳ ನೇಮಕಾತಿಗೆ ಆಸಕ್ತ ಪುರುಷ ಹಾಗೂ ಮಹಿಳಾ ಡ್ರೈವರ್ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಭಾರೀ ಟ್ರಕ್ ಹಾಗೂ ಟ್ರೈಲರ್ ಡ್ರೈವಿಂಗ್ ಉದ್ಯೋಗಕ್ಕೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಜೂನ್ 11 ರೊಳಗೆ ನಗರದ ಅಶೋಕ ನಗರದಲ್ಲಿರುವ ಉರ್ವಾ ಮಾರುಕಟ್ಟೆ ಕಟ್ಟಡದ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಇದೇ ಜೂನ್ 20 ಹಾಗೂ 21ರಂದು ಉದ್ಯೋಗದಾತರಿಂದ ನೇರ ಸಂದರ್ಶನ […]

ಕಲಾವಿದ ಹಾಗೂ ಗ್ರಾಫಿಕ್ ಡಿಸೈನರ್ ಗಳಿಗೆ ಕ್ರಾಫ್ಟ್ಸ್ ಮಂತ್ರದಲ್ಲಿ ಉದ್ಯೋಗಾವಕಾಶ

ಉಡುಪಿ: ಉಡುಪಿಯ ಇಂದ್ರಾಳಿಯಲ್ಲಿರುವ ಕ್ರಾಫ್ಟ್ಸ್ ಮಂತ್ರದಲ್ಲಿ ಕಲಾವಿದ ಹಾಗೂ ಗ್ರಾಫಿಕ್ ಡಿಸೈನರ್ ಗಳಿಗೆ ಫುಲ್ ಟೈಮ್ ಮತ್ತು ಪಾರ್ಟ್ ಟೈಮ್ ಉದ್ಯೋಗಾವಕಾಶವಿದ್ದು , ಆಸಕ್ತ ಕಲಾವಿದರು ಅರ್ಜಿ ಸಲ್ಲಿಸಬಹುದು. ಬೇಕಾಗಿರುವ ಕೌಶಲ್ಯ: ಚಿತ್ರಕಲೆ ಮತ್ತು ಕಂಪ್ಯೂಟರ್ ಜ್ಞಾನ ಆಸಕ್ತರು ತಮ್ಮ ವೈಯಕ್ತಿಕ ಮಾಹಿತಿಯನ್ನು [email protected] ಇ-ಮೇಲ್ ಮಾಡಬಹುದು ಅಥವಾ 6362571412 ಗೆ ಕರೆಮಾಡಬಹುದು.

ಮುರುಡೇಶ್ವರ: ಟಾಟಾ ಮೋಟಾರ್ಸ್ ನಲ್ಲಿ ಉದ್ಯೋಗಾವಕಾಶ

ಮುರುಡೇಶ್ವರದ ಟಾಟಾ ಮೋಟಾರ್ಸ್ ಮ್ಯಾನಿಕ್ ಬ್ಯಾಗ್ ಆಟೋಮೊಬೈಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಸೇವಾ ಸಲಹೆಗಾರ ಮತ್ತು ತಂತ್ರಜ್ಞ ಹುದ್ದೆ ಲಭ್ಯವಿದ್ದು, ಆಸಕ್ತರು [email protected]ಗೆ ತಮ್ಮ ಸ್ವ ವಿವರಗಳನ್ನು ಇ-ಮೇಲ್ ಮಾಡಬಹುದು ಅಥವಾ ದೂರವಾಣಿ ಸಂಖ್ಯೆ 08385-200625, 98455-10469 ಅನ್ನು ಸಂಪರ್ಕಿಸಬಹುದು. ವಿಳಾಸ: ಮ್ಯಾನಿಕ್ ಬ್ಯಾಗ್ ಆಟೋಮೊಬೈಲ್ ಪ್ರೈವೇಟ್ ಲಿಮಿಟೆಡ್ ರೈಲ್ವೆ ನಿಲ್ದಾಣದ ಹತ್ತಿರ ಮುರುಡೇಶ್ವರ, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ-581350

ಬ್ರಹ್ಮಾವರ: ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನಲ್ಲಿ ಪ್ರವೇಶಾತಿ ಆರಂಭ

ಬ್ರಹ್ಮಾವರ: ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ, ಕರ್ನಾಟಕ ಸರ್ಕಾರದಿಂದ ಗುರುತಿಸಲ್ಪಟ್ಟಿರುವ ISO 9001:2015 ಪ್ರಮಾಣೀಕೃತ ಸಂಸ್ಥೆ ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನಲ್ಲಿ 2022-23 ಸಾಲಿನ ಪ್ರವೇಶಾತಿಗಳು ಆರಂಭಗೊಂಡಿದೆ. BSc FT, BSc BT, BHS, BSc FD, BCA, BBA, BCOM, BSc, PCM ಮುಂತಾದ ವಿಭಾಗಗಳು ಲಭ್ಯವಿದೆ. ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಲು ಬಯಸುವವರು [email protected]/www.vidyalaxmiedu.com ಅನ್ನು ಅಥವಾ ದೂರವಾಣಿ ಸಂಖ್ಯೆ: 8197480919 ,9901250431 ಅನ್ನು ಸಂಪರ್ಕಿಸಬಹುದು ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.