ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಅವಶ್ಯ: ಸಂತೋಷ್ ಡಿಸಿಲ್ವಾ
ಕಾರ್ಕಳ: ಶಿಕ್ಷಣ ಎಂದರೇ ಕೇವಲ ಪಾಠ ಪ್ರವಚನ ಮಾತ್ರವಲ್ಲ, ವಿದ್ಯಾರ್ಥಿಯ ದೇಹ ಮನಸ್ಸುಗಳನ್ನು ಒಂದುಗೂಡಿಸುವ ಜ್ಞಾನದ ಜೊತೆಗೆ ಕ್ರೀಡೆಯೂ ಕೂಡಾ ಬಹು ಮುಖ್ಯ. ಆಗ ಮಾತ್ರ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೊಳ್ಳಲು ಸಾಧ್ಯ ಎಂದು ಉದ್ಯಮಿ ಸಂತೋಷ್ ಡಿಸಿಲ್ವಾ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ಗಣಿತನಗರ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಪರಿಶ್ರಮ ಮತ್ತು ಮುನ್ನುಗ್ಗುವ ಛಲವಿದ್ದಲ್ಲಿ ಕ್ರೀಡೆಯಲ್ಲಿ ಉತ್ತಮ ಭವಿಷ್ಯವಿದೆ. ಜೀವನದಲ್ಲಿ ಒತ್ತಡ ರಹಿತವಾಗಿರಲು ಕ್ರೀಡೆಗಳು […]
ರನ್ನಿಂಗ್ ರೇಸ್ ನಲ್ಲಿ ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿ ಕಾರ್ತಿಕ್ ವೈ ರಾಜ್ಯಮಟ್ಟಕ್ಕೆ ಆಯ್ಕೆ
ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಉಡುಪಿ ಜ್ಞಾನಸುಧಾ ಪಿ.ಯು.ಕಾಲೇಜಿನ ಆಶ್ರಯದಲ್ಲಿ ನವೆಂಬರ್ 29 ಹಾಗೂ 29 ರಂದು ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ, ಕಾರ್ಕಳ ಜ್ಞಾನಸುಧಾದ ಕಾರ್ತಿಕ್ ವೈ 1500 ಮೀಟರ್ ರೇಸ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಜನ ವಿ ಬೆಸ್ಕೂರ್ ಡಿಸ್ಕಸ್ ತ್ರೋ ನಲ್ಲಿ ತೃತೀಯ ಹಾಗೂ 4*100 ಮೀ ರಿಲೇಯಲ್ಲಿ ಸನ್ನಿಧಿ ಶೆಟ್ಟಿ, ಸನ್ನಿಧಿ, ಸನ್ನಿಧಿ ಪೂಜಾರಿ ಹಾಗೂ ಅದಿತಿ ಶೆಟ್ಟಿ ಇವರು ತೃತೀಯ […]
ಸಾಂಸ್ಕೃತಿಕ ಸ್ಪರ್ಧೆ: ಕಾರ್ಕಳ ಜ್ಞಾನಸುಧಾದ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ
ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಹಾಸನ ಜಿಲ್ಲೆಯ ಹೆಚ್.ಕೆ.ಎಸ್. ಪಿ.ಯು.ಕಾಲೇಜಿನ ಆಶ್ರಯದಲ್ಲಿ ಡಿ. 1 ರಂದು ನಡೆದ ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕಾರ್ಕಳ ಜ್ಞಾನಸುಧಾದ ಮೂವರು ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆತ್ಮಿಕಾ ಶೆಟ್ಟಿ ಇವರು ಇಂಗ್ಲಿಷ್ ಆಶು ಭಾಷಣ ಸ್ಫರ್ಧೆಯಲ್ಲಿ ಪ್ರಥಮ, ವೈಷ್ಣವಿ ಶೆಟ್ಟಿ ಇವರು ಕನ್ನಡ ಚರ್ಚಾ ಸ್ಫರ್ಧೆಯಲ್ಲಿ ದ್ವಿತೀಯ ಹಾಗೂ ತನ್ವಿ ಶೆಟ್ಟಿ ಇವರು ಇಂಗ್ಲಿಷ್ ಆಶು ಭಾಷಣದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಇವರನ್ನು ಎಪಿಜಿಇಟಿ ಯ […]
ಉಡುಪಿ ಜಿಲ್ಲಾ ಮಟ್ಟದ ಪ.ಪೂ. ವಿದ್ಯಾರ್ಥಿಗಳ ಕ್ರೀಡಾಕೂಟ ಸಮಾರೋಪ ಸಮಾರಂಭ
ಉಡುಪಿ: ಪ.ಪೂ. ಶಿಕ್ಷಣ ಇಲಾಖೆ ಮತ್ತು ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ.ಪೂ. ವಿದ್ಯಾರ್ಥಿಗಳ ಕ್ರೀಡಾಕೂಟದ ಸಮಾರೋಪ ಸಮಾರಂಭ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಉಡುಪಿ ಇಲ್ಲಿ ನವೆಂಬರ್ 29 ರಂದು ಜರುಗಿತು. ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷದ ದಾಖಲೆಗಳನ್ನು ಮುಂದಿನ ವರ್ಷದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮುರಿದವರಿಗೆ ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ […]
ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ: ಜ್ಞಾನಸುಧಾ ಕಾಲೇಜು ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ
ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಉಡುಪಿ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಜಾನಪದ ಗೀತೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಕು.ಸಿಂಚನಾ.ವಿ.ನಾಯಕ್, ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಕು.ವೈಷ್ಣವಿ ಶೆಟ್ಟಿ, ರಸಪ್ರಶ್ನೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಭರತ್ ಗೌಡ ಹಾಗೂ ಪ್ರಥಮ್ ಸ್ವರೂಪ್ ಪ್ರಥಮ ಸ್ಥಾನವನ್ನು ಹಾಗೂ ಇಂಗ್ಲಿಷ್ ಆಶುಭಾಷಣದಲ್ಲಿ ಪ್ರಥಮ ವಿಜ್ಞಾನ […]