ಬಟ್ಟೆ ಮಳಿಗೆ ಮಾಲೀಕರಿಂದ ಕಿರುಕುಳ ಆರೋಪ: ಆಟೋ ಚಾಲಕರ ಸಂಘದಿಂದ ಪ್ರತಿಭಟನೆ
ಉಡುಪಿ: ಬನ್ನಂಜೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೆಸರಾಂತ ಬಟ್ಟೆ ಮಳಿಗೆಯ ಮಾಲಿಕರು ಹಾಗೂ ಸಿಬ್ಬಂದಿಗಳು ರಿಕ್ಷಾ ಚಾಲಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಅವರ ವಿರುದ್ದ ಕ್ರಮಕೈಗೊಳ್ಳಲು ಆಗ್ರಹಿಸಿ ರಿಕ್ಷಾ ಚಾಲಕರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಟ್ಟೆ ಮಳಿಗೆಯ ಮಾಲಕರು ಹಾಗೂ ಸಿಬ್ಬಂದಿಗಳು ಇತ್ತೀಚೆಗಷ್ಟೇ ಆಟೋ ರಿಕ್ಷಾ ಚಾಲಕರೊಬ್ಬರ ಕೀಯನ್ನು ಕಸಿದುಕೊಂಡು ರಿಕ್ಷಾ ತೆಗೆಯದಂತೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಳಿಗೆ ಮುಂದೆ ಗಲಾಟೆ ನಡೆದಿದ್ದು ನಂತರ ಪೊಲೀಸರ ಮಧ್ಯ ಪ್ರವೇಶದಿಂದ […]