ವಿಶ್ವದ ಅತ್ಯಂತ ದುಬಾರಿ ಸಂಪೂರ್ಣ ಕಪ್ಪು ಕೋಳಿ ಅಯಮ್ ಸೆಮಾನಿ: ಒಂದು ಜೋಡಿ ಬೆಲೆ 5000 ಡಾಲರ್!
ಅಯಮ್ ಸೆಮಾನಿ ಇಂಡೋನೇಷ್ಯಾದಲ್ಲಿ ಕಾಣಸಿಗುವ ಅಪರೂಪದ ಮತ್ತು ತುಲನಾತ್ಮಕವಾಗಿ ಆಧುನಿಕ ಕೋಳಿ ತಳಿಯಾಗಿದೆ. ಇವು ಪ್ರಬಲವಾದ ಜೀನ್ ಅನ್ನು ಹೊಂದಿದ್ದು ಅದು ಹೈಪರ್ಪಿಗ್ಮೆಂಟೇಶನ್ (ಫೈಬ್ರೊಮೆಲನೋಸಿಸ್) ಅನ್ನು ಉಂಟುಮಾಡುತ್ತದೆ, ಇದು ಕೋಳಿಯನ್ನು ಸಂಪೂರ್ಣವಾಗಿ ಕಪ್ಪು ಮಾಡುತ್ತದೆ. ಎಷ್ಟೆಂದರೆ ಇವುಗಳ ಗರಿಗಳು, ಕೊಕ್ಕು, ಮಾಂಸ, ಮೂಳೆಗಳು ಮತ್ತು ಆಂತರಿಕ ಅಂಗಗಳು ಸೇರಿದಂತೆ ಎಲ್ಲವೂ ಕೃಷ್ಣಮಯಂ! ಇಂಡೋನೇಷಿಯನ್ ಭಾಷೆಯಲ್ಲಿ ಅಯಮ್ ಎಂದರೆ “ಕೋಳಿ”, ಸೆಮಾನಿ ಎಂದರೆ (ಮೂಲತಃ ಜಾವಾನೀಸ್ ಪದ) “ಸಂಪೂರ್ಣವಾಗಿ ಕಪ್ಪು” (ಮೂಳೆಗಳವರೆಗೆ). ಒಂದು ಹಕ್ಕಿಯು ನಿಜವಾದ ಆಯಮ್ ಸೆಮಾನಿಯಾಗಲು […]