ತೈವಾನ್ ನಲ್ಲಿ 7.5 ತೀವ್ರತೆಯ ಭೂಕಂಪ: ಕರಾವಳಿ ತೀರಗಳಿಗೆ ಸುನಾಮಿ ಎಚ್ಚರಿಕೆ ನೀಡಿದ ಜಪಾನ್, ಫಿಲಿಪ್ಪೀನ್ಸ್
ಟೋಕಿಯೋ: ತೈವಾನ್ ಬಳಿ ಸಮುದ್ರದಲ್ಲಿ 7.5 ರ ಪ್ರಾಥಮಿಕ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು (Earthquake) ಸುನಾಮಿ (Tsunami) ಎಚ್ಚರಿಕೆಯನ್ನು ಪ್ರಚೋದಿಸಿದ ನಂತರ ಜಪಾನ್ (Japan) ದಕ್ಷಿಣ ಪ್ರಾಂತ್ಯದ ಓಕಿನಾವಾ ಕರಾವಳಿ ಪ್ರದೇಶದ ಜನರಿಗೆ ಸ್ಥಳಾಂತರಿಸುವ ಸಲಹೆಯನ್ನು ನೀಡಿದೆ. ಜಪಾನ್ ಹವಾಮಾನ ಸಂಸ್ಥೆ ಪ್ರಕಾರ, 3 ಮೀಟರ್ ವರೆಗಿನ ಸುನಾಮಿ ಅಲೆಗಳು ಜಪಾನ್‌ನ ನೈಋತ್ಯ ಕರಾವಳಿಯ ಹೆಚ್ಚಿನ ಪ್ರದೇಶಗಳನ್ನು ತಲುಪುವ ನಿರೀಕ್ಷೆಯಿದೆ. ಬುಧವಾರ ಬೆಳಿಗ್ಗಿನ ಜಾವ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಒಬ್ಬರು ಸಾವನ್ನಪ್ಪಿರುವ ವರದಿಯಾಗಿದೆ. ಜಪಾನ್ […]
Asian Team Championship 2024: ಮಾಜಿ ಚಾಂಪಿಯನ್ ಜಪಾನ್ ಅನ್ನು ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟ ಭಾರತೀಯ ಮಹಿಳಾ ಶಟ್ಲರ್‌ಗಳು
ಶನಿವಾರ ನಡೆದ ರೋಚಕ ಸೆಮಿಫೈನಲ್‌ನಲ್ಲಿ ಎರಡು ಬಾರಿಯ ಮಾಜಿ ಚಾಂಪಿಯನ್ ಜಪಾನ್‌ನನ್ನು 3-2 ಗೋಲುಗಳಿಂದ ಸೋಲಿಸಿದ ನಂತರ ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಮೊದಲ ಫೈನಲ್‌ಗೆ ಮುನ್ನಡೆಯುತ್ತಿರುವ ಭಾರತೀಯ ಮಹಿಳಾ ಶಟ್ಲರ್‌ಗಳು ದಾಖಲೆ ನಿರ್ಮಿಸಿದ್ದಾರೆ. ವಿಶ್ವದ ನಂ. 23 ಜೋಡಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್, ವಿಶ್ವದ ನಂ. 53 ಅಶ್ಮಿತಾ ಚಲಿಹಾ ಮತ್ತು 17 ವರ್ಷದ ಅನ್ಮೋಲ್ ಖಾರ್ಬ್ ಮೊದಲ ಡಬಲ್ಸ್ ಮತ್ತು ಎರಡನೇ ಮತ್ತು ಸಿಂಗಲ್ಸ್‌ನಲ್ಲಿ ಭಾರತವನ್ನು ಫೈನಲ್ ಪಂದ್ಯಕ್ಕೆ ಕರೆದೊಯ್ಯಲು […]
ಜಪಾನ್‌ನ ಹೊಕ್ಕೈಡೋದಲ್ಲಿ 6.1 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ ಇಲ್ಲ
ಟೋಕಿಯೊ: ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಜಪಾನ್‌ನ ಉತ್ತರ ದ್ವೀಪವಾದ ಹೊಕ್ಕೈಡೋದ ಪೂರ್ವ ಭಾಗದಲ್ಲಿ ಶನಿವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಅರ್ಥ್ ಸೈನ್ಸ್ ಮತ್ತು ಡಿಸಾಸ್ಟರ್ ರೆಸಿಲಿಯನ್ಸ್ ಪ್ರಕಾರ ಭೂಕಂಪನವು ನೆಮುರೊ ಪರ್ಯಾಯ ದ್ವೀಪದಲ್ಲಿ 61 ಕಿಲೋಮೀಟರ್ (38 ಮೈಲುಗಳು) ಆಳದಲ್ಲಿ ಅಪ್ಪಳಿಸಿದೆ. ಆದಾಗ್ಯೂ, ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿಲ್ಲ. ಜಪಾನ್‌ನ ಉತ್ತರದ ಪ್ರಮುಖ ದ್ವೀಪಗಳಲ್ಲಿ ಒಂದಾದ ಹೊಕ್ಕೈಡೊ ನಗರದಲ್ಲಿ ಸೋಮವಾರದಂದು 5.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದೀಗ […]
ನಿಟ್ಟೆ: ಜಪಾನಿನ ನಿಡ್ಯಾಕ್-ರೀಡ್ ಕಂಪೆನಿಯ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ
ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಜಪಾನ್ ನ ನಿಡ್ಯಾಕ್-ರೀಡ್ ಕಾರ್ಪೋರೇಶನ್ ಸಂಸ್ಥೆಯ ಸಹಯೋಗದಲ್ಲಿ ನಿಟ್ಟೆ ಕ್ಯಾಂಪಸ್ ನಲ್ಲಿ ನಿಡ್ಯಾಕ್-ರೀಡ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಆರಂಭಿಸಿದೆ. ಮಂಗಳವಾರದಂದು ನಿಡ್ಯಾಕ್-ರೀಡ್ ಸಂಸ್ಥೆಯ ನಿರ್ದೇಶಕ ಹಾಗೂ ಸಿ.ಇ.ಒ ಹಿಡೆಕಾಜು ಯಮಜಕಿ ಅವರು ಗಣ್ಯರ ಸಮ್ಮುಖದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆಗೊಳಿಸಿ ಮಾತನಾಡಿ, ಭಾರತದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲೊಂದಾಗಿರುವ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದೊಂದಿಗೆ ನಿಡ್ಯಾಕ್ ರೀಡ್ ಸಂಸ್ಥೆಯು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ […]
ಸಿಂಗಾಪುರ ಓಪನ್: ಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು
ಭಾರತದ ಬ್ಯಾಡ್ಮಿಂಟನ್ ಪಟು ಪಿವಿ ಸಿಂಧು 21-15, 21-7 ಸೆಟ್‌ಗಳಿಂದ ಜಪಾನಿನ ಶಟ್ಲರ್ ಸೈನಾ ಕವಾಕಮಿ ವಿರುದ್ಧ ನೇರ ಗೆಲುವು ಸಾಧಿಸುವ ಮೂಲಕ ಸಿಂಗಾಪುರ ಓಪನ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಕೇವಲ ಅರ್ಧಗಂಟೆಯಲ್ಲಿ ಮುಗಿದ ಪಂದ್ಯದಲ್ಲಿ ಸಿಂಧು ತಮ್ಮ ಎದುರಾಳಿಯನ್ನು ಸೋಲಿಸಿದ್ದಾರೆ ಪಂದ್ಯಾವಳಿಯಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿ ಸಿಂಧು ಭಾಗವಹಿಸಿದ್ದಾರೆ.