ಪಕ್ಷವನ್ನು ಗ್ರಾಮಮಟ್ಟದಲ್ಲಿ ಸದೃಢಗೊಳಿಸಲು ‘ಜನಸೇವಕ್ ಸಮಾವೇಶ’: ಕುಯಿಲಾಡಿ
ಉಡುಪಿ: ರಾಜ್ಯದಲ್ಲಿ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಬೆಂಬಲಿಗ ಅಭ್ಯರ್ಥಿಗಳು ಅಭೂತಪೂರ್ವ ಜಯಗಳಿಸಿದ ಹಿನ್ನೆಲೆಯಲ್ಲಿ ಪಕ್ಷವನ್ನು ಗ್ರಾಮ ಮಟ್ಟದಲ್ಲಿ ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಬಿಜೆಪಿಯು ಪ್ರತಿ ಜಿಲ್ಲೆಯಲ್ಲಿಯೂ ‘ಗ್ರಾಮಸೇವಕ್ ಸಮಾವೇಶ’ವನ್ನು ಆಯೋಜಿಸುತ್ತಿದೆ. ಈ ಮೂಲಕ ಪಕ್ಷದಲ್ಲಿ ಜವಾಬ್ದಾರಿ ಹೊತ್ತಿರುವ ಎಲ್ಲಾ ಕಾರ್ಯಕರ್ತರನ್ನು ಸಕ್ರಿಯ ಗೊಳಿಸುವಲ್ಲಿ ಪ್ರಯತ್ನಗಳಾಗುತ್ತಿವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಬಿಜೆಪಿ ಉಡುಪಿ ನಗರ ಇದರ ಆಶ್ರಯದಲ್ಲಿ ನಗರ ಬಿಜೆಪಿ ಕಚೇರಿಯಲ್ಲಿ ನಡೆದ ಜನವರಿ 12ರಂದು ನಡೆಯುವ […]