ಪಾನಮತ್ತನಾಗಿ ಪೊಲೀಸರೊಂದಿಗೆ ಜೈಲರ್ ನಟನ ಗಲಾಟೆ ಪ್ರಕರಣ: ಜಾಮೀನು ನೀಡಿದ್ದಕ್ಕೆ ಪೊಲೀಸರ ಮೇಲೆ ಹರಿಹಾಯ್ದ ವಿರೋಧ ಪಕ್ಷ ಕಾಂಗ್ರೆಸ್
ಕೊಚ್ಚಿ: ಪಾನಮತ್ತನಾಗಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗಲಾಟೆ ಸೃಷ್ಟಿಸಿದ ಆರೋಪದ ಮೇಲೆ ಬಂಧಿತರಾಗಿರುವ ಜೈಲರ್ ಚಿತ್ರದ ಖಳ ನಟ ವಿನಾಯಕನ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳನ್ನು ಮಾತ್ರ ಹಾಕಿರುವ ಕೇರಳ ಪೊಲೀಸರ ನಡೆಯನ್ನು ವಿರೋಧ ಪಕ್ಷ ಕಾಂಗ್ರೆಸ್ ಖಂಡಿಸಿದೆ. ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಹೆಂಡತಿಯೊಂದಿಗೆ ವಿವಾದದ ಕುರಿತಾಗಿ ಪೊಲೀಸರು ಮಂಗಳವಾರ ಸಂಜೆ ಠಾಣೆಗೆ ಕರೆದಿದ್ದ ಸಂದರ್ಭದಲ್ಲಿ ಎರ್ನಾಕುಲಂ ಟೌನ್ ನಾರ್ತ್ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಇದೀಗ […]
ಜೈಲರ್ ಚಿತ್ರದ ನಟ, ನಿರ್ದೇಶಕ ಜಿ ಮಾರಿಮುತ್ತು ಹೃದಯಾಘಾತದಿಂದ ನಿಧನ
ಚೆನ್ನೈ: ಜನಪ್ರಿಯ ತಮಿಳು ನಟ ಮತ್ತು ನಿರ್ದೇಶಕ ಜಿ ಮಾರಿಮುತ್ತು ಅವರು ಶುಕ್ರವಾರ, ಸೆಪ್ಟೆಂಬರ್ 8 ರಂದು ತಮ್ಮ 58 ನೇ ವಯಸ್ಸಿನಲ್ಲಿ ನಿಧನರಾದರು. ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ, ತಮ್ಮ ದೂರದರ್ಶನ ಕಾರ್ಯಕ್ರಮ ‘ಎಥಿರ್ನೀಚಲ್’ ನ ಡಬ್ಬಿಂಗ್ ಮಾಡುವಾಗ ಕುಸಿದು ಬಿದ್ದಿದ್ದಾರೆ. ನಟನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಮಾರಿಮುತ್ತು ಅವರು ಯೂಟ್ಯೂಬ್ ಸೆನ್ಸೇಷನ್ ಆಗಿದ್ದರು ಮತ್ತು ‘ಜೈಲರ್’ ಮತ್ತು ‘ರೆಡ್ ಸ್ಯಾಂಡಲ್ ವುಡ್’ ಚಿತ್ರದಲ್ಲಿನ […]
ಚಿತ್ರರಂಗದ ದಿಗ್ಗಜ ನಟರಾದ ರಜನಿಕಾಂತ್ ಹಾಗೂ ಶಿವರಾಜ್ ಕುಮಾರ್ ಎ.ಜೆ.ಗ್ರ್ಯಾಂಡ್ ಹೋಟೇಲ್ ನಲ್ಲಿ ವಾಸ್ತವ್ಯ
ಮಂಗಳೂರು: ತಮ್ಮ ಮುಂಬರುವ ಜೈಲರ್ ಚಿತ್ರದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಆಗಮಿಸಿದ್ದ ಚಿತ್ರರಂಗದ ದಿಗ್ಗಜ ನಟರಾದ ರಜನಿಕಾಂತ್ ಹಾಗೂ ಶಿವರಾಜ್ ಕುಮಾರ್ ನಗರದ ಪ್ರತಿಷ್ಠಿತ ಎ.ಜೆ. ಗ್ರ್ಯಾಂಡ್ ಹೋಟೇಲಿನಲ್ಲಿ ವಾಸ್ತವ್ಯ ಹೂಡಿದ್ದರು. ಹೋಟೇಲಿನ ವ್ಯವಸ್ಥಾಪಕ ನಿರ್ದೇಶಕ ಎ.ಜೆ.ಶೆಟ್ಟಿ ಹಾಗೂ ಉಪನಿರ್ದೇಶಕ ಪ್ರಶಾಂತ್ ಶೆಟ್ಟಿ ನಟರನ್ನು ಬರಮಾಡಿಕೊಂಡರು. ಜೈಲರ್ ಚಿತ್ರದ ಚಿತ್ರೀಕರಣವು ಮಂಗಳೂರಿನ ಪಿಲಿಕುಳದ ಗುತ್ತಿನ ಮನೆಯಲ್ಲಿ ನಡೆಯುತ್ತಿದ್ದು, ಈ ಸಂದರ್ಭ ಸಾಧು ಕೋಕಿಲ, ಯೋಗಿ ಬಾಬು ಮುಂತಾದ ನಟರು ಜಿಲ್ಲೆಗೆ ಆಗಮಿಸಿದ್ದು, ಹೋಟೇಲ್ ನಲ್ಲಿ ತಂಗಿದ್ದಾರೆ ಮತ್ತು ಇಲ್ಲಿನ […]