ತಮಿಳುನಾಡಿನಲ್ಲಿ ಐಟಿ ದಾಳಿ: ₹250 ಕೋಟಿ ಕಪ್ಪುಹಣ ಪತ್ತೆ

ನವದೆಹಲಿ: ತಮಿಳುನಾಡಿನ ಎರಡು ಉದ್ಯಮ ಸಮೂಹಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ, ಬರೋಬ್ಬರಿ ₹250 ಕೋಟಿ ಕಪ್ಪುಹಣ ಪತ್ತೆ ಮಾಡಿದೆ. ಇತ್ತೀಚೆಗೆ ತಮಿಳುನಾಡಿನ ರೇಷ್ಮೆ ಸೀರೆಗಳ ವ್ಯಾಪಾರ ಹಾಗೂ ಚಿಟ್‌ ಫಂಡ್‌ ವ್ಯವಹಾರ ನಡೆಸುವ ಉದ್ಯಮಗಳ ಮೇಲೆ ದಾಳಿ ನಡೆಸಿದೆ. ಕಾಂಚಿಪುರ, ವೆಲ್ಲೂರ್‌ ಹಾಗೂ ಚೆನ್ನೈಗಳಲ್ಲಿ 34 ಸ್ಥಳಗಳಲ್ಲಿ ಅಕ್ಟೋಬರ್‌ 5ರಂದು ಶೋಧ ಕಾರ್ಯ ಕೈಗೊಳ್ಳಲಾಗಿತ್ತು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಚಿಟ್‌ ಫಂಡ್‌  ನಡೆಸುತ್ತಿರುವ ಸಮೂಹವು ಅಕ್ರಮ ವ್ಯವಹಾರದಲ್ಲಿಯೂ […]