ಹಿಂದೂಗಳನ್ನು ಅವಮಾನಿಸುವುದು ಈಗ ಫ್ಯಾಷನ್ ಆಗಿದೆ: ‘ಪೊಗರು’ ಚಿತ್ರದ ವಿರುದ್ಧ ಸಂಸದೆ ಶೋಭಾ ಕಿಡಿ

ಬೆಂಗಳೂರು: ಸಿನಿಮಾದವರಿಗೆ ಹಿಂದೂ ದೇವರು-ದೇವತೆಗಳನ್ನು ಅವಮಾನಿಸುವುದು ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ತರುವುದು ಫ್ಯಾಷನ್ ಆಗಿ ಬಿಟ್ಟಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ‘ಪೊಗರು’ ಸಿನಿಮಾದ ವಿರುದ್ಧ ವಾಗ್ದಾಳಿ ನಡೆಸಿದರು. ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನಕಾರಿ ದೃಶ್ಯಗಳ ಆರೋಪದ ವಿವಾದದ ಕುರಿತು ಟ್ವೀಟ್ ಮಾಡಿರುವ ಕರಂದ್ಲಾಜೆ, ಇದೇ ರೀತಿ ಬೇರೆ ಧರ್ಮಗಳನ್ನು ಅಪಮಾನ ಮಾಡುವ ಧೈರ್ಯ ನಿಮಗಿದೆಯೇ ಎಂದು ಪ್ರಶ್ನಿಸಿದ ಅವರು, ಹಿಂದೂ ಧರ್ಮಗಳ ಭಾವನೆಗೆ ಧಕ್ಕೆ ತರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ವಿವಾದಾತ್ಮಕ ದೃಶ್ಯಗಳನ್ನು […]