ಇಂದ್ರಾಳಿ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ

ಉಡುಪಿ: ಹಲವು ದಿನಗಳ ಎಡೆಬಿಡದ ಕಾಮಗಾರಿಯ ಬಳಿಕ ಇಂದ್ರಾಳಿ ಕಾಂಕ್ರೀಟ್ ರಸ್ತೆ ಪೂರ್ಣಗೊಂಡಿದ್ದು, ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. 56 ಮೀ ಸೇತುವೆ ಕಾಮಗಾರಿಯ ಜೊತೆಗೆ 200 ಮೀ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣವಾಗಿದೆ. ಸೋಮವಾರದಿಂದ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ವರದಿಯಾಗಿದೆ.